ಈ ಕುರಿತು ಮಾಹಿತಿ ನೀಡಿರುವ ಅವರು, ಕುಡಿದ ಮತ್ತಿನಲ್ಲಿದ್ದ 17 ವರ್ಷದ ಯುವಕನೊಬ್ಬ ಮದ್ಯದ ಅಂಗಡಿಯ ಬಳಿ ಇರುವ ತಾತಾಜಿ ಎಂಬ ಅಪರಿಚಿತ ವ್ಯಕ್ತಿ ಬಳಿ ಸರಾಯಿ ಖರೀದಿಸಲು 10 ರೂ. ಕೇಳಿದ್ದಾನೆ. ಈ ವೇಳೆ ಆ ವ್ಯಕ್ತಿ ಹಣ ಕೊಡಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ತಾತಾಜಿ ಎಂಬ ವ್ಯಕ್ತಿ ಮೊದಲು ಯುವಕನಿಗೆ ಹೊಡೆದಿದ್ದಾನೆ. ಅದೇ ಸಿಟ್ಟಿನಿಂದ ಯುವಕ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ತಿಳಿಸಿದ್ದಾರೆ.