ಮೊದಲ ಪತ್ನಿಯ ಫೋಟೋ ಸ್ಟೇಟಸ್​ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ!

suicide
suicide
Published on
ಉತ್ತರಪ್ರದೇಶ: 27 ವರ್ಷದ ಆಲೋಕ್ ವರ್ಮಾ ಎಂಬ ಯುವಕ ಒಯೋ ಹೋಟಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆಗೂ ಮುನ್ನ ಆಲೋಕ್ ಅವರು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮೊದಲ ಪತ್ನಿಯ ಫೋಟೋ ಹಾಕಿ, "ನಾನು ನಿನ್ನ ಬಳಿ ಬರುತ್ತಿದ್ದೇನೆ... ಎಲ್ಲರೂ ನನ್ನನ್ನು ಕ್ಷಮಿಸಿ" ಎಂದು ಭಾವುಕ ಸಂದೇಶ ಬರೆದಿದ್ದರು.
ಪೊಲೀಸ್ ಮಾಹಿತಿ ಪ್ರಕಾರ, ಆಲೋಕ್ ಅವರ ಮೊದಲ ಪತ್ನಿ ಮೃತಪಟ್ಟಿದ್ದರು. ನಂತರ ಮತ್ತೊಂದು ಮದುವೆಯಾಗಿತ್ತು ಮತ್ತು ಕುಟುಂಬ ಜೀವನ ಸಾಮಾನ್ಯವಾಗಿ ನಡೆಯುತ್ತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಮೊದಲ ಪತ್ನಿಯ ನೆನಪು ಅವರನ್ನು ಖಿನ್ನತೆಗೆ ಒಳಪಡಿಸಿತ್ತು ಎನ್ನಲಾಗುತ್ತಿದೆ.
ಡಿಸೆಂಬರ್ 22ರ ರಾತ್ರಿ ಹೋಟಲ್‌ಗೆ ಬಂದಿದ್ದ ಆಲೋಕ್ ಅವರು ಮರುದಿನ ಬೆಳಗ್ಗೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಳ್ಳಾರಿಯಲ್ಲಿ ಕಾರು ಅಪಘಾತ: ಸ್ಥಳದಲ್ಲೇ ಮೂವರು ಮೃತ

ಬಳ್ಳಾರಿ: ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬಳಿ ಬುಧವಾರ ಬೆಳಗಿನ ಜಾವ ನಡೆದಿದೆ.
ಸಿರಗುಪ್ಪ ನಿವಾಸಿಗಳಾದ ಪ್ರಸಾದ್ ರಾವ್ (75), ವಿಜಯ (70), ಸಂಧ್ಯಾ (35) ಮೃತರು. ಕಾರಿನಲ್ಲಿದ್ದ ಇನ್ನೂ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿ ವಾಪಸ್ಸು ಬರುವಾಗ ದೇವಿನಗರದ ಬಳಿ ಘಟನೆ ನಡೆದಿದೆ.ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net