_1771608764548.webp?w=480&auto=format%2Ccompress&fit=max)
_1771608764548.webp?w=480&auto=format%2Ccompress&fit=max)
ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಿಂದ ವೈದಿಕ ಶಿಕ್ಷಣದ ಜತೆಗೆ ಹಲವು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದರಿಂದ ಕ್ಷೇತ್ರದಲ್ಲಿ ಸ್ವಂತ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಶ್ರೀಮಠದಿಂದ ವಿಶ್ವ ವಿದ್ಯಾಲಯ ಅಧ್ಯಯನ ಕಮಿಟಿ ಮಾಡಲಾಗಿದೆಂದು ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಮಠದ ಅಭಿವೃದ್ಧಿಗೆ ಅನೇಕ ಸಂಘ ಸಂಸ್ಥೆಗಳು ಅನುದಾನವನ್ನು ನೀಡುತ್ತಿದ್ದವೆ. ಕಳೆದ ಸುಮಾರು ವರ್ಷಗಳಿಂದ ಕ್ಷೇತ್ರದಲ್ಲಿ ಸ್ವಂತ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದ್ದು, ಇದರ ಭಾಗವಾಗಿ ಈಚೆಗೆ ಕೇಂದ್ರದ ವಿಶ್ವ ವಿದ್ಯಾಲಯದ ಪ್ರೊ. ಹರೆ ಕೃಷ್ಣ ಶತಾಪತಿ ಅವರನ್ನು ಬರಮಾಡಿಕೊಂಡು ಅವರಿಂದ ವಿವಿಯ ಸ್ಥಾಪನೆಗೆ ಸಲಹೆಗಳನ್ನು ಪಡೆದು ವಿವಿ ಅಧ್ಯಯನ ಕಮಿಟಿಯನ್ನು ಮಾಡಲಾಗಿದ್ದು, ರಾಜ್ಯದ ವಿವಿಧ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಪರಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಿದ ನಂತರ ವಿಶ್ವ ವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದರು.
ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಎರಡು ಬಾರಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ರಾಯಚೂರು ಹಾಗೂ ಕರ್ನೂಲ್ನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದ್ದರಿಂದ ಹೂಡಿಕೆದಾರರು ನಿಲ್ದಾಣ ಸ್ಥಾಪನೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದರು.
ಯಾವುದೇ ದೇಶದಲ್ಲಿ ಧರ್ಮಗಳ ನಡುವೆ ದಬ್ಬಾಳಿಕೆ ,ದೌರ್ಜನ್ಯ ಆಗಬಾರದು ನಮ್ಮದು ಹಿಂದೂ ದೇಶ ನಾವು ಯಾರಿಗೂ ದಬ್ಬಾಳಿಕೆ ಮಾಡಿಲ್ಲ. ಬೇರೆ ದೇಶದ ಜನರು ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಿರುವುದು ನಾವು ಖಂಡಿಸುತ್ತೇವೆ. ಕೂಡಲೇ ವಿಶ್ವ ಸಂಸ್ಥೆಯವರು ಸಂಬಂಧ ಪಟ್ಟ ದೇಶದ ರಾಯಭಾರಿ ಕಚೇರಿಯ ಅಧಿಕಾರಿಗಳ ಜತೆಗೆ ವ್ಯವಹಾರ ನಡೆಸಿ ದೌರ್ಜನ್ಯವನ್ನು ತಡೆಯಬೇಕು. ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಳ್ಳಲು ಈಗಾಗಲೇ ಸಂಘ ಪರಿವಾರದವರ ಜತೆ ಮಾತನಾಡಿದ್ದೇವೆ ಶೀಘ್ರವಾಗಿ ಪ್ರದಾನಿ ಬರುತ್ತಾರೆ.
ಇತ್ತೀಚಿನ ದಿನಗಳಲ್ಲಿ ರಾಯರ ಮಠಕ್ಕೆ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಶ್ರೀಮಠದಿಂದ ಭಕ್ತರ ಅನುಕೂಲಕ್ಕಾಗಿ ಡೋಮೆಟ್ರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಯರ ದರ್ಶನಕ್ಕಾಗಿ ಯಾವುದೇ ಶುಲ್ಕವನ್ನು ಶ್ರೀಮಠ ಮಾಡಿಲ್ಲ ಎಂದರು.