

IND vs WI ODI: ಗುವಾಹಟಿಯಲ್ಲಿ ಇಂದು(ಸೆ.30) ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಇಂಡೀಸ್ ನೀಡಿರುವ 406 ರನ್ಗಳ ಗುರಿ ಬೆನ್ನಟ್ಟಿರುವ ಭಾರತ ತಂಡ, ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶುಭಮಾನ್ ಗಿಲ್ ಭರ್ಜರಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ.
ಭಾರತದ ಪರವಾಗಿ ಸೆಕೆಂಡ್ ಆಫ್ ಬ್ಯಾಟಿಂಗ್ ಶುರು ಮಾಡಿದ ರೋಹಿತ್ ಶರ್ಮಾ ಮತ್ತು ಶುಭಮಾನ್ ಗಿಲ್ ವೇಗದ ಶತಕ ಸಿಡಿಸಿದ್ದಾರೆ. 62 ಎಸೆತಗಳಲ್ಲಿ ಗಿಲ್ ಶತಕ ಸಿಡಿಸಿದ್ರೆ, 72 ಎಸೆತಗಳಲ್ಲಿ ರೋಹಿತ್ ಶರ್ಮಾ ಶತಕ ಗಳಿಸಿ, 250 ರನ್ಗಳ ಜೊತೆಯಾಟವಾಡಿದ್ದಾರೆ.
ಆರಂಭದಲ್ಲಿ ಎಚ್ಚರಿಕೆಯ ಆಟವನ್ನಾಡಿದ ಗಿಲ್, ಇನ್ನಿಂಗ್ಸ್‌ನ ಆರಂಭಿಕ ಹಂತದಲ್ಲಿ ರೋಹಿತ್‌ಗೆ ಆಕ್ರಮಣಕಾರಿ ಆಟವಾಡಲು ಅವಕಾಶ ನೀಡಿದರು. ಆದರೆ 400 ರನ್ಗಳ ಗುರಿ ಬೆನ್ನಟ್ಟುವಿಕೆ ವೇಗ ಪಡೆದುಕೊಳ್ಳುತ್ತಿದ್ದಂತೆ, ಗಿಲ್ ಟದ ವೇಗವನ್ನು ಹೆಚ್ಚಿಸಿ ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ಚಚ್ಚಿ ಬೀಸಾಡಿದ್ದು, ಕೇವಲ 62 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.
ಮತ್ತೊಂದೆಡೆ, ರೋಹಿತ್ ಶರ್ಮಾ 72 ಎಸೆತಗಳಲ್ಲಿ ತಮ್ಮ 35ನೇ ಶತಕ ಸಿಡಿಸುವ ಜೊತೆ ಏಕದಿನ ಪಂದ್ಯಗಳಲ್ಲಿ 12,000 ರನ್‌ಗಳನ್ನು ಪೂರೈಸಿದ ಮೂರನೇ ಭಾರತೀಯ ಆಟಗಾರರಾಗಿ ದಾಖಲೆ ನಿರ್ಮಿಸಿದರು. ಅಂತಿಮವಾಗಿ 101 ರನ್‌ಗಳಿಗೆ ಔಟಾದರು.
ಇನ್ನೂ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ, ಜಾನ್ ಕ್ಯಾಂಪ್‌ಬೆಲ್, ಶಾಯ್ ಹೋಪ್ ಮತ್ತು ಅಮೀರ್ ಜಂಗೂ ಮೂವರು ಶತಕದಾಟದಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ.