ಪಕ್ಷಿಗಾಗಿ ಮಿಡಿದ ಮನಸ್ಸು: ಕ್ರೇನ್ ಏರಿ ಹಕ್ಕಿಯನ್ನು ಸಾವಿನ ದವಡೆಯಿಂದ ಬಿಡಿಸಿದ ವ್ಯಕ್ತಿ! ಇಲ್ಲಿದೆ ನೋಡಿ ವಿಡಿಯೋ..

 crane
crane
Published on
ಚಂಢಿಗಡ: ಪಂಜಾಬ್‌ನ ಫಿರೋಜ್‌ಪುರದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಮಾನವೀಯತೆ ಮತ್ತು ಸಾಹಸಕ್ಕೆ ಸಾಕ್ಷಿಯಾಗಿದೆ. 
ಹೌದು, ಗಾಳಿಪಟದ ದಾರದಲ್ಲಿ (ಮಂಜಾ) ಸಿಲುಕಿ ಪ್ರಾಣಾಪಾಯದಲ್ಲಿದ್ದ ಪಕ್ಷಿಯೊಂದನ್ನು ರಕ್ಷಿಸಲು ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ರೇನ್ ಮೂಲಕ ನೇತಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವಿದ್ಯುತ್ ತಂತಿಗಳು ಮತ್ತು ಎತ್ತರದ ಮರಗಳ ನಡುವೆ ಹಕ್ಕಿಯೊಂದು ದಾರದಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಕೂಡಲೇ ಕಾರ್ಯಪ್ರವೃತ್ತರಾದರು. ಪಕ್ಷಿಯನ್ನು ರಕ್ಷಿಸಲು ಅವರು ಬೃಹತ್ ಕ್ರೇನ್‌ನ ಸಹಾಯ ಪಡೆದರು. ಕ್ರೇನ್‌ನ ಕೊನೆಯ ಭಾಗವನ್ನು ಹಿಡಿದು ನೂರಾರು ಅಡಿ ಎತ್ತರಕ್ಕೆ ಹೋದ ಆ ವ್ಯಕ್ತಿ, ಅಲ್ಲಿ ಸಮತೋಲನ ಕಾಯ್ದುಕೊಂಡು ಅತ್ಯಂತ ಜಾಗರೂಕತೆಯಿಂದ ಪಕ್ಷಿಯನ್ನು ಬಿಡಿಸಿ ಅದರ ಜೀವ ಉಳಿಸಿದರು ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ವೈರಲ್ ವಿಡಿಯೋ ಮತ್ತು ಸಾರ್ವಜನಿಕ ಪ್ರತಿಕ್ರಿಯೆ
ಈ ಇಡೀ ಸಾಹಸದ ದೃಶ್ಯವನ್ನು ಅಲ್ಲಿ ನೆರೆದಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕೇವಲ ಕ್ರೇನ್ ಕಡ್ಡಿಯನ್ನು ಹಿಡಿದು ಗಾಳಿಯಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪವೇ ಆಯತಪ್ಪಿದ್ದರೂ ಪ್ರಾಣಕ್ಕೆ ಅಪಾಯವಿತ್ತು. ಆದರೆ ಆತ ಯಾವುದಕ್ಕೂ ಅಂಜದೆ ಪಕ್ಷಿಯ ಪ್ರಾಣ ಉಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು ವ್ಯಕ್ತಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. "ಇಂದಿನ ಕಾಲದಲ್ಲಿ ಮನುಷ್ಯರೇ ಮನುಷ್ಯರನ್ನು ಮರೆಯುತ್ತಿರುವಾಗ, ಮೂಕ ಪ್ರಾಣಿಯ ರಕ್ಷಣೆಗೆ ನಿಂತ ಇವರಿಗೆ ಸರ್ಕಾರವು 'ಶೌರ್ಯ ಪ್ರಶಸ್ತಿ' ನೀಡಬೇಕು" ಎಂದು ಅನೇಕರು ಒತ್ತಾಯಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net