ಮೇಲ್ನೋಟಕ್ಕೆ ಅನಿಮೇಷನ್ ಫಿಲ್ಮ್ ಮೇಕರ್, ಭದ್ರತಾ ವಿಶ್ಲೇಷಕ ಮತ್ತು ಯುದ್ಧ ವರದಿಗಾರ ಎಂದು ಗುರುತಿಸಿಕೊಂಡಿದ್ದ ವ್ಯಾನ್‌ಡೈಕ್, ವಾಸ್ತವದಲ್ಲಿ ಒಬ್ಬ 'ಶ್ಯಾಡೋ ಆಪರೇಟಿವ್' (ನೆರಳಿನಂತೆ ಕೆಲಸ ಮಾಡುವ ಗುಪ್ತಚರ). ಅಮೆರಿಕದ ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಈತ, ಇರಾಕ್ ಮತ್ತು ಲಿಬಿಯಾ ಯುದ್ಧಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಹಳೆಯ ಇತಿಹಾಸ ಹೊಂದಿದ್ದಾನೆ. ಈತ 'ಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್' (SOLI) ಎಂಬ ಖಾಸಗಿ ಮಿಲಿಟರಿ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿ, ಜಗತ್ತಿನಾದ್ಯಂತ ಬಂಡುಕೋರರಿಗೆ 'ಸ್ಪೆಷಲ್ ಫೋರ್ಸ್' ಮಾದರಿಯ ತರಬೇತಿ ನೀಡುತ್ತಿದ್ದನು.