ಇದು ಕೇವಲ ಒಂದು ಘಟನೆಯಲ್ಲ; ಪ್ರಾಣಿಗಳ ಮೇಲಿನ ಇಂತಹ ಲೈಂಗಿಕ ದೌರ್ಜನ್ಯಗಳು ಭಾರತದಲ್ಲಿ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಪೇಟಾ (PETA) ಇಂಡಿಯಾ ಸಂಸ್ಥೆಯ ಪ್ರಕಾರ, ಜುಲೈ 2024ರಿಂದ ಈವರೆಗೆ ಪ್ರಾಣಿಗಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 40ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಹಸುಗಳು, ನಾಯಿಗಳು, ಮೇಕೆಗಳು ಮತ್ತು ಕುದುರೆಗಳೂ ಇಂತಹ ವಿಕೃತ ಕಾಮಿಗಳ ಬಲಿಪಶುವಾಗುತ್ತಿವೆ. ಮುಂಬೈ ಒಂದರಲ್ಲೇ 2026ರ ಜನವರಿ ಮತ್ತು ಫೆಬ್ರವರಿಯಲ್ಲಿ ಇಂತಹದ್ದೇ ಎರಡು ಪ್ರಕರಣಗಳು ವರದಿಯಾಗಿದ್ದವು.