ಇಂತಹ ಪರಿಸ್ಥಿತಿಯಲ್ಲಿ, ಚೆನ್ನೈನ ಒಂದು ಹೋಟೆಲ್‌ನಲ್ಲಿ ಇಡ್ಲಿ, ವಡೆ ಜೊತೆಗೆ ಗ್ಯಾಸ್ಗೂ ಸೇರಿಸಿ ಹಾಕಿದ ಬಿಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಬಿಲ್ ಅನ್ನು ನೋಡಿದ ನೆಟ್ಟಿಗರಂತು ಹೋಟೆಲ್ ಮಾಲೀಕರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಚೆನ್ನೈನ ಪೆರುಂಗುಡಿಯ ಹೋಟೆಲ್‌ನಲ್ಲಿ ಗ್ರಾಹಕರೊಬ್ಬರು, ಇಡ್ಲಿ ಮತ್ತು ವಡಾ ಆರ್ಡರ್ ಮಾಡಿದ್ದರು. ಇಡ್ಲಿ ಮತ್ತು ವಡೆಗೆ 33.33 ಬಿಲ್ ಹಾಕಲಾಗಿದ್ದು, ಅದರಲ್ಲಿ ಶೇ.5ರಷ್ಟು ಜಿಎಸ್‌ಟಿ ಸೇರಿಸಲಾಗಿತ್ತು. ಆದರೆ, ಅದರ ಕೆಳಗೆ ಹೆಚ್ಚುವರಿ 9.52 ರೂ. ಗ್ಯಾಸ್ ಶುಲ್ಕ ಎಂಬುದನ್ನು ನೋಡಿ ಅವರ ಪಿತ್ತ ನೆತ್ತಿಗೇರಿದೆ.