'ಎನ್ಡಿಟಿವಿ' ವರದಿ ಪ್ರಕಾರ, ಐದು ವರ್ಷಗಳಿಂದ ತಂದೆ-ಮಗಳಿಗೆ ಚಿತ್ರಹಿಂಸೆ ನೀಡಿದ ದಂಪತಿ, ಕಡೆಗೂ ನಿವೃತ್ತ ರೈಲ್ವೆ ಉದ್ಯೋಗಿಯ ಜೀವವನ್ನು ಬಲಿ ಪಡೆದಿದ್ದಾರೆ. ವ್ಯಕ್ತಿಯ ಸಾವಿನಿಂದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಓಂ ಪ್ರಕಾಶ್ ಸಿಂಗ್ ರಾಥೋರ್ (70), ನಿವೃತ್ತ ಹಿರಿಯ ರೈಲ್ವೆ ಕ್ಲರ್ಕ್ ಎಂದು ಗುರುತಿಸಲಾಗಿದೆ. ಇವರ ಪುತ್ರಿ ರಶ್ಮಿ (27) ಮಾನಸಿಕ ಅಸ್ವಸ್ಥಳು ಎಂದು ಹೇಳಲಾಗಿದ್ದು, ಸರಿಯಾದ ಊಟ-ನೀರು ಸಿಗದೆ ಯುವತಿಯ ದೇಹ ಪೂರ ಒಣಗಿ ಹೋಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.