ಬಂಗಾಳದ ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ಕೇಳಿಬರುತ್ತಿರುವ ಅತ್ಯಂತ ರೋಚಕ ಸುದ್ದಿಯೆಂದರೆ, ಇನ್ಮೇಲೆ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದ ತಕ್ಷಣ ಅವರ ಮೇಲೆ ದೀರ್ಘಾವಧಿಯ ನ್ಯಾಯಾಲಯದ ಮೊಕದ್ದಮೆಗಳನ್ನು ಹೂಡಿ ಜೈಲಿನಲ್ಲಿ ಇಟ್ಟುಕೊಳ್ಳುವ ಬದಲು, ಆಡಳಿತ ಯಂತ್ರವು ಅವರನ್ನು ನೇರವಾಗಿ ಗಡಿಯಲ್ಲಿರುವ ಗಡಿ ರಕ್ಷಣಾ ಪಡೆಗೆ (BSF) ಹಸ್ತಾಂತರಿಸಲಿದೆ. ಬಿಎಸ್‌ಎಫ್ ಪಡೆಗಳು ತಕ್ಷಣವೇ ಫ್ಲಾಗ್ ಮೀಟಿಂಗ್ ನಡೆಸಿ ಬಾಂಗ್ಲಾದೇಶದ ಗಡಿ ಕಾವಲು ಪಡೆಗೆ ಇವರನ್ನು ಹಸ್ತಾಂತರಿಸಲಿವೆ. ಈ ಹೊಸ ನೀತಿಯಿಂದಾಗಿ ಗಡೀಪಾರು ಪ್ರಕ್ರಿಯೆಯು ಕೇವಲ 48 ಗಂಟೆಗಳ ಒಳಗೆ ಮುಕ್ತಾಯಗೊಳ್ಳಲಿದ್ದು, ಸರ್ಕಾರದ ಮೇಲಿನ ಆರ್ಥಿಕ ಹೊರೆಯೂ ತಗ್ಗಲಿದೆ.