ಗೆಳತಿಯನ್ನು ಕೊಂದು ಪ್ಲಾಸ್ಟಿಕ್​ ಚೀಲದಲ್ಲಿ ತುಂಬಿಸಿ ಪಕ್ಕದ ಮನೆಯ ಮುಂದೆ ಎಸೆದ ಸ್ನೇಹಿತ! ಮುಂದೇನಾಯ್ತು ಗೊತ್ತಾ?.. plastic bag

 plastic bag
plastic bag
Published on
ಜೈಪುರ: ( plastic bag) ಸ್ನೇಹಿತನೊಬ್ಬ ಹಣದ ವಿಚಾರವಾಗಿ ಬೇಸರಗೊಂಡು ಗೆಳತಿಯನ್ನು ಕೊಂದು ಪ್ಲಾಸ್ಟಿಕ್​ ಚೀಲದಲ್ಲಿ ತುಂಬಿ ಪಕ್ಕದ ಮನೆ ಮುಂದೆ ಇಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಬಬಿತಾ ಶರ್ಮಾ ಮೃತ ಯುವತಿ. ಜಿತೇಂದ್ರ ಸಿಂಗ್​ ಅಲಿಯಾಸ್ ರಾಹುಲ್​​ ಕೊಲೆ ಆರೋಪಿಯಾಗಿದ್ದಾನೆ. ಶವ ವಶಪಡಿಸಿಕೊಂಡ ನಾಲ್ಕು ಗಂಟೆಗಳಲ್ಲಿ ಪೊಲೀಸರು ಈ ಕೊಲೆಯ ರಹಸ್ಯವನ್ನು ಭೇದಿಸಿ ಆರೋಪಿಯನ್ನು ಹಿಡಿದಿದ್ದಾರೆ.

ನಡೆದಿದ್ದೇನು?:

ಶಾಸ್ತ್ರಿ ನಗರದ ಮನೆಯೊಂದರಲ್ಲಿ ಮಂಗಳವಾರ (ಡಿಸೆಂಬರ್ 23) ಬೆಳಿಗ್ಗೆ, ಮನೆಯ ಹೊರಗೆ ಒಂದು ಚೀಲ ಬಿದ್ದಿರುವುದನ್ನು ಮನೆಯ ಮಾಲೀಕ ಮುನ್ನಿ ದೇವಿ ನೋಡಿದ್ದಾರೆ. ನಂತರ ಈ ಚೀಲ ವಾಸನೆ ಬರುತ್ತಿರುವುದನ್ನು ಗಮನಿಸಿ ತೆರೆದಿದ್ದಾರೆ. ಈ ವೇಳೆ ಮಹಿಳೆಯ ಶವ ಇರುವುದು ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ನಿಫರ್ ನಾಯಿಯನ್ನು ಸ್ಥಳಕ್ಕೆ ಕರೆಸಲಾಯಿತು. ನಾಯಿ ಪಕ್ಕದ ಮನೆಯಲ್ಲಿ ಪದೇ ಪದೇ ಸುತ್ತಾಡುತ್ತಿದ್ದಾಗ ಪೊಲೀಸರಿಗೆ ಅನುಮಾನ ಬಂದು ಆ ಮನೆ ಜಿತೇಂದ್ರ ಸಿಂಗ್​ಗೆ ಸೇರಿದ್ದು ಎಂದು ತಿಳಿದು ವಿಚಾರಣೆ ಮಾಡಿದ್ದಾರೆ. ಆಗ ಅಸಲಿ ಸಂಗತಿ ಬಯಲಿಗೆ ಬಂದಿದೆ.
ಸುಭಾಷ್ ಕಾಲೋನಿಯಲ್ಲಿ ವಾಸಿಸುವ ನಾನು ಮತ್ತು ಬಬಿತಾ ಸ್ನೇಹಿತರು. ಇಬ್ಬರ ನಡುವೆ ಹಣಕಾಸಿನ ವಿವಾದವಿತ್ತು. ಪ್ರತಿದಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಳು. ಹೀಗಾಗಿ ನಾನು ಈ ಮನೆಯನ್ನು ಮಾರಿದ್ದೇನು. ಬಬಿತಾ ಮೇಲೆ ಬೇಸತ್ತು ಆಕೆಯ ಮನೆಯಲ್ಲಿಯೇ ಕೊಲ್ಲಲು ನಿರ್ಧರಿಸಿದನು. ಮನೆ ಈಗಾಗಲೇ ಮಾರಾಟವಾಗಿರುವುದರಿಂದ ಯಾರೂ ತನ್ನ ಮೇಲೆ ಅನುಮಾನ ವ್ಯಕ್ತಪಡಿಸಲ್ಲ ಎಂದು ಡಿಸೆಂಬರ್​ 21ರಂದು ಆಖೆಯನ್ನು ಇಲ್ಲಿಯೇ ಕೊಲೆ ಮಾಡಿದೆ.
ನಂತರ ಅವನು ಅವಳ ದೇಹವನ್ನು ಚೀಲದಲ್ಲಿ ತುಂಬಿಸಿ ಪಕ್ಕದ ಮನೆಯ ಮುನ್ನಿ ದೇವಿಯ ಮನೆಯ ಹೊರಗೆ ಚೀಲವನ್ನು ಎಸೆದನು. ಪೊಲೀಸರು ವಿಚಾರಣೆಗೆ ಬಂದಾಗ, ಯಾರಿಗೂ ಅನುಮಾನ ಬರದಂತೆ ಅಲ್ಲಿಯೇ ಇದ್ದನು ಎಂದು ಆರೋಪಿ ತಾನು ಮಾಡಿದ ಕೊಲೆಯನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಪ್ರಸ್ತುತ, ಆರೋಪಿ ರಾಹುಲ್ ಪೊಲೀಸ್ ವಶದಲ್ಲಿದ್ದಾನೆ. ಅವನ ವಿಚಾರಣೆ ಮುಂದುವರೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net