ಇನ್ನೂ ಬಿಹಾರ ಕಾನೂನು ಸುವ್ಯವಸ್ಥೆ ಬಗ್ಗೆ ಕಿಡಿಕಾರಿರುವ ವಿಪಕ್ಷ ನಾಯಕ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರದ ಭಯಾನಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಒಬ್ಬ ವ್ಯಕ್ತಿ ಮಾರುಕಟ್ಟೆಯ ಮಧ್ಯದಲ್ಲಿ, ನೂರಾರು ಜನರ ಮುಂದೆ ಇನ್ನೊಬ್ಬ ವ್ಯಕ್ತಿಯ ಕತ್ತು ಸೀಳಿದ್ದಾನೆ. ನಂತತ ಕತ್ತರಿಸಿದ ತಲೆಯೊಂದಿಗೆ ಓಡಾಡಿದ್ದಾನೆ. ಬಳಿಕ ಮೃತರ ಕುಟುಂಬ ಸದಸ್ಯರು ಮತ್ತೆ ಕೊಲೆಗಾರನನ್ನು ಕೊಂದಿದ್ದಾರೆ. ಸಿಎಂ ಸ್ಥಾನಕ್ಕಾಗಿ ಆಡಳಿತರೂಢ ಎನ್ಡಿಎ ನಾಯಕರು ಪೈಪೋಟಿ ನಡೆಸುತ್ತಿದ್ದು, ಬಿಹಾರದಲ್ಲಿ ಇಂತಹ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).