ಕೊಲೊಂಬೊ: ಟಿ20 ವಿಶ್ವಕಪ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು 61 ರನ್‌ಗಳಿಂದ ಧೂಳೀಪಟ ಮಾಡಿದ ಭಾರತ, ವಿಜಯಯಾತ್ರೆ ಮುಂದುವರಿಸಿದೆ. ಆದರೆ, ಪಂದ್ಯದ ವೇಳೆ ನಡೆದ ಒಂದು ಸಣ್ಣ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಆ ಎಲ್ಲ ವಿವಾದಗಳಿಗೆ ಸೂರ್ಯಕುಮಾರ್ ಯಾದವ್ ಮತ್ತು ಕುಲದೀಪ್ ಯಾದವ್(Surya-Kuldeep) ಖುದ್ದಾಗಿ ತೆರೆ ಎಳೆದಿದ್ದಾರೆ.