ತಂದೆಯೊಂದಿಗಿನ ಜಗಳದಲ್ಲಿ 4 ವರ್ಷದ ಬಾಲಕನನ್ನು ಎತ್ತಿ ನೆಲಕ್ಕೆ ಬಡಿದು ಕ್ರೌರ್ಯ ಮೆರೆದ ಪಾಪಿ: ಸಿಸಿಟಿವಿಯಲ್ಲಿ ಸೆರೆ | fight

ಬಾಲಕ ವಿಘ್ನೇಶ್
ಬಾಲಕ ವಿಘ್ನೇಶ್
Published on
ಮುಂಬೈ: ಮಹಾರಾಷ್ಟ್ರದ ಮುಂಬೈ ಬಳಿಯ ವಸೈ ಪ್ರದೇಶದಲ್ಲಿ ಸಣ್ಣ ವಿಷಯಕ್ಕೆ ಇಬ್ಬರ ನಡುವೆ ನಡೆದ ಜಗಳದಲ್ಲಿ(fight) ಪಾಪಿಯೊಬ್ಬ ಎದುರಾಳಿಯ ನಾಲ್ಕು ವರ್ಷದ ಪುಟ್ಟ ಮಗುವನ್ನು ಎತ್ತಿ ನೆಲಕ್ಕೆ ಬಡಿದು ಕ್ರೌರ್ಯ ಮೆರೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕ್ರೂರ ಘಟನೆ ವಸತಿ ಸೊಸೈಟಿಯಲ್ಲಿ ನಡೆದಿದ್ದು, ವೀಡಿಯೊದಲ್ಲಿ ಹಳದಿ ಟೀ ಶರ್ಟ್ ಧರಿಸಿದ ವಿಘ್ನೇಶ್ ಎಂದು ಗುರುತಿಸಲಾದ ಬಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಗುವಿನ ತಂದೆಯೊಂದಿಗೆ ಸಣ್ಣ ವಿಷಯಕ್ಕೆ ಜಗಳವಾಡಿದ ಸಂದೀಪ್ ಪವಾರ್ ಎನ್ನುವ ಆರೋಪಿ, ತಂದೆ ಮೇಲಿನ ಸೇಡು ತೀರಿಸಿಕೊಳ್ಳಲು ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಕುಳಿತು ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವಿಘ್ನೇಶ್ ಬಳಿಗೆ ಬಂದು ಅವನ ಕಾಲುಗಳನ್ನು ಹಿಡಿದು ವಾಹನದಿಂದ ಹೊರಗೆಳೆದು, ಎತ್ತಿ ನೆಲಕ್ಕೆ ಬಡಿದು, ರಾಡ್​ನಿಂದ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾನೆ.
ಬಾಲಕ ವಿಘ್ನೇಶ್​ನನ್ನು ಮೀರಾ ರಸ್ತೆಯಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಐಸಿಯುನಲ್ಲಿ ದಾಖಲಿಸಲಾಗಿದೆ ಬಾಲಕನ ಸ್ಥಿತಿ ಇನ್ನೂ ಗಂಭೀರವಾಗಿದೆ. ಘಟನೆ ಬಳಿಕ ಪಾಪಿಯನ್ನು ಬಂಧಿಸಲಾಗಿದ್ದು, ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net