ಮೊದಲು, ನಾನು ನನ್ನ ಕಾರ್ಪೊರೇಟ್ ಕೆಲಸವನ್ನು ಬಿಟ್ಟು ನನ್ನ ಹಳ್ಳಿಗೆ ಹೋಗಿ ಹೋಂಸ್ಟೇ ಪ್ರಾರಂಭಿಸಿದೆ. ಮೊದಲಿಗೆ ಅದು ತುಂಬಾ ಕಷ್ಟಕರವಾಗಿತ್ತು. ನನಗೆ ಉತ್ತಮ ಆದಾಯ ಸಿಗಲಿಲ್ಲ. ನಂತರ ನಾನು ವ್ಯವಹಾರದ ಬಗ್ಗೆ ಇನ್ನಷ್ಟು ಹೆಚ್ಚು ತಿಳಿದುಕೊಂಡೆ. ಇಂದು ನಾನು ಹೆಚ್ಚಿನ ಪ್ರವಾಸಿ ನಗರಗಳಲ್ಲಿ ಹೋಂಸ್ಟೇಗಳನ್ನು ನಡೆಸುತ್ತಿದ್ದೇನೆ. ಸರಾಸರಿ, ತಿಂಗಳಿಗೆ ಸುಮಾರು 1 ಲಕ್ಷ ರೂ. ಗಳಿಸುತ್ತೇನೆ. ಕೆಲವೊಮ್ಮೆ, ಇದು 40,000 ರಿಂದ 50,000 ರೂ.ಗಳಿಗೆ ಇಳಿಯಬಹುದು. ಆದರೆ ಪ್ರವಾಸಿ ದಿನಗಳಲ್ಲಿ, ಇದು 3 ರಿಂದ 4 ಲಕ್ಷ ರೂ.ಗಳಿಗೆ ಏರಬಹುದು ಎಂದು ಯುವಕ ರೆಡಿಟ್ ಪೋಸ್ಟ್ನಲ್ಲಿ ಹೇಳಿದ್ದಾನೆ