ಈ ಘಟನೆಯು ನವೆಂಬರ್ 30, 2025 ರಂದು ನಡೆದಿದೆ. ಡಿಸೆಂಬರ್ 1 ರಂದು ಫರಿದಾಬಾದ್‌ನ ಮೇವಾಲಾ ಮಹಾರಾಜ್‌ಪುರ ರೈಲ್ವೆ ಹಳಿಗಳ ಮೇಲೆ ಪುರುಷನೊಬ್ಬನ ಮೃತದೇಹ ಪತ್ತೆಯಾಗಿತ್ತು. ಶವದ ಮುಖ ಸಂಪೂರ್ಣವಾಗಿ ಜಜ್ಜಲ್ಪಟ್ಟಿದ್ದರಿಂದ ಆತನನ್ನು ಗುರುತಿಸುವುದು ಅಸಾಧ್ಯವಾಗಿತ್ತು. ಆರಂಭದಲ್ಲಿ ಪೊಲೀಸರು ಇದು ರೈಲು ಡಿಕ್ಕಿಯಾಗಿ ಸಂಭವಿಸಿದ ಅಪಘಾತವಿರಬಹುದು ಎಂದು ಭಾವಿಸಿದ್ದರು. ಮೃತದೇಹದ ಬಳಿ ಯಾವುದೇ ಗುರುತಿನ ಚೀಟಿಗಳು ಇಲ್ಲದ ಕಾರಣ, ಅನಾಮಧೇಯ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಶವವನ್ನು ಶವಾಗಾರದಲ್ಲಿ ಇರಿಸಲಾಗಿತ್ತು.