ಮಾಹಿತಿ ತಿಳಿದ ಕೂಡಲೇ ಆಂಬುಲೆನ್ಸ್ ಮೂಲಕ ತಾಯಿ ಮತ್ತು ನವಜಾತ ಶಿಶುವನ್ನು ಪಿತಾಂಬುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಮುಖ್ಯ ವೈದ್ಯಕೀಯ ಅಧಿಕಾರಿ (CMHO) ಡಾ. ಅನಿತಾ ಸಿಂಘರ್ ಮಾತನಾಡಿ, "ವೈದ್ಯಕೀಯ ತಪಾಸಣೆಯ ಪ್ರಕಾರ ಮಗು 34 ವಾರಗಳಲ್ಲಿ ಜನಿಸಿದ್ದು, ಸುಮಾರು 2 ಕೆಜಿ ತೂಕವಿದೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ," ಎಂದು ತಿಳಿಸಿದ್ದಾರೆ.