92 ಸಾವಿರ ಕೋಟಿ ರೂ. ವೆಚ್ಚದಲ್ಲಿ ಟರ್ವಿುನಲ್; ನಿರ್ಮಾಣ ಗ್ರೇಟ್ ನಿಕೋಬಾರ್​ಗೆ ಅನುಮತಿ

great-nicobar
great-nicobar
Published on
ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್​ಶಿಪ್​ವೆುಂಟ್ ಟರ್ವಿುನಲ್ ನಿರ್ವಿುಸಲು ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್​ಜಿಟಿ) ಅನುಮತಿ ನೀಡಿದೆ.
ಎನ್​ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಕೋಲ್ಕತದ ಪೂರ್ವ ವಲಯ ಪೀಠ ಉದ್ದೇಶಿತ 92 ಸಾವಿರ ಕೋಟಿ ರೂ. ವೆಚ್ಚದ ಟರ್ವಿುನಲ್, ಟೌನ್​ಶಿಪ್ ಮತ್ತು ಯೋಜನೆ ಪ್ರದೇಶದ ಅಭಿವೃದ್ಧಿ, 450 ಎಂವಿಎ ಅನಿಲ ಮತ್ತು ಸೌರ ಆಧಾರಿತ ವಿದ್ಯುತ್ ಸ್ಥಾವರದ ವಿರುದ್ಧದ ಆಕ್ಷೇಪಣೆ ಅರ್ಜಿಗಳ ವಿಚಾರಣೆ ನಡೆಸಿ ಸೋಮವಾರ ಈ ಯೋಜನೆಗೆ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ. ದ್ವೀಪದ ಪರಿಸರಕ್ಕೆ ಯಾವುದೇ ಹಾನಿ ಮಾಡಬಾರದು, ಅಲ್ಲಿನ ಸಸ್ಯ, ಪ್ರಾಣಿ ಮತ್ತು ಜಲಚರಗಳನ್ನು ರಕ್ಷಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಈ ಯೋಜನೆಯಲ್ಲಿ ಗ್ರೇಟ್ ನಿಕೋಬಾರ್ ದ್ವೀಪದ ದಕ್ಷಿಣ ಕರಾವಳಿಯಲ್ಲಿರುವ ಗಲಾಥಿಯಾ ಕೊಲ್ಲಿಯಲ್ಲಿ ಆಳ ಸಮುದ್ರದ ಬಂದರು ನಿರ್ವಿುಸಲಾಗುವುದು. ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್​ಶಿಪ್​ವೆುಂಟ್ ಟರ್ವಿುನಲ್ ವಿದೇಶಿ ಬಂದರುಗಳ ಮೇಲಿನ ಅವಲಂಬನೆ ತಗ್ಗಿಸಲಿದೆ. ಇದು ವರ್ಷಕ್ಕೆ 1 ಕೋಟಿ 60 ಲಕ್ಷ ಕಂಟೇನರ್​ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಯೋಜನೆಯಲ್ಲಿ ನಾಗರಿಕ ಮತ್ತು ರಕ್ಷಣೆ ಎರಡೂ ಉದ್ದೇಶಳಿಗೆ ಬಳಕೆ ಆಗಲಿರುವ ಗ್ರೀನ್​ಫೀಲ್ಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣವಾಗಲಿದೆ. ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗಾಗಿ ಸಮಗ್ರ ಟೌನ್​ಶಿಪ್ ನಿರ್ವಣವಾಗಲಿದೆ.

ಪರಿಸರವಾದಿಗಳ ವಿರೋಧ

ಗ್ರೇಟ್ ನಿಕೋಬಾರ್ ಯೋಜನೆಗೆ ಎನ್​ಜಿಟಿ ಅನುಮತಿ ನೀಡಿರುವುದು ನಿರಾಶಾದಾಯಕ ಮತ್ತು ದುರದೃಷ್ಟಕರ. ಇದರಿಂದ ಅಲ್ಲಿನ ಪರಿಸರದ ಮೇಲೆ ವಿನಾಶಕಾರಿ ಪರಿಣಾಮ ಉಂಟಾಗಲಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net