ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಮೆಟ್ರೋ ನಗರಗಳ ಏರುತ್ತಿರುವ ಜೀವನ ವೆಚ್ಚದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಗುರುಗ್ರಾಮ್, ಬೆಂಗಳೂರಿನಂತಹ ನಗರಗಳಲ್ಲಿ ಮಧ್ಯಮ ವರ್ಗದವರು ಉಳಿತಾಯ ಮಾಡುವುದೇ ದೊಡ್ಡ ಸಾಹಸ" ಎಂದು ಕೆಲವರು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು 20,000 ರೂ.ಗಳ ಹೂಡಿಕೆ ಮಾಡುತ್ತಿರುವುದನ್ನು ಶ್ಲಾಘಿಸಿದ್ದಾರೆ. ಒಟ್ಟಾರೆಯಾಗಿ, ಈ ಬಜೆಟ್ ಪಟ್ಟಿ ಇಂದಿನ ಯುವ ಪೀಳಿಗೆಯು ಹಣಕಾಸು ನಿರ್ವಹಣೆ ಮತ್ತು ಜೀವನಶೈಲಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಪಡುತ್ತಿರುವ ಕಷ್ಟವನ್ನು ಪ್ರತಿಬಿಂಬಿಸುತ್ತಿದೆ,(ಏಜೆನ್ಸೀಸ್).