ದೆಹಲಿಯ ಶಾಲೆಯೊಂದರಲ್ಲಿ 9 ವರ್ಷದ ಬಾಲಕಿ ಹೃದಯಾಘಾತದಿಂದ ಸಾ* : ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ | girl dies

ದೆಹಲಿಯ ಶಾಲೆಯೊಂದರಲ್ಲಿ 3 ನೇ ತರಗತಿ ಓದುತ್ತಿದ್ದ ಒಂಬತ್ತು ವರ್ಷದ ಬಾಲಕಿ ತರಗತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ(ನ. 04) ನಡೆದಿದೆ. ಹೃದಯಾಘಾತದ ಶಂಕೆ ವ್ಯಕ್ತಪಡಿಸಲಾಗಿದೆ. ಮತ್ತು ಬಾಲಕಿ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೆಹಲಿಯ ಶಾಲೆಯೊಂದರಲ್ಲಿ 9 ವರ್ಷದ ಬಾಲಕಿ ಹೃದಯಾಘಾತದಿಂದ ಸಾ* : ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ | girl dies
Published on: 

ನವದೆಹಲಿ: ದೆಹಲಿಯ ಶಾಲೆಯೊಂದರಲ್ಲಿ 3 ನೇ ತರಗತಿ ಓದುತ್ತಿದ್ದ ಒಂಬತ್ತು ವರ್ಷದ ಬಾಲಕಿ ತರಗತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ(ನ. 04) ನಡೆದಿದೆ. ಹೃದಯಾಘಾತದ ಶಂಕೆ ವ್ಯಕ್ತಪಡಿಸಲಾಗಿದೆ. ಮತ್ತು ಬಾಲಕಿ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೂರ್ವ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಪಿಟಿ ಅವಧಿ ಬಳಿಕ ತರಗತಿಗೆ ಮರಳಿದ ಬಳಿಕ ಬಾಲಕಿ ಇದ್ದಕ್ಕಿದ್ದಂತೆ ಮುಖ ಕೆಳಗೆ ಮಾಡಿ ಬಿದ್ದಿದ್ದಾಳೆ. ತಕ್ಷಣ ತರಗತಿಯಲ್ಲಿದ್ದ ಶಿಕ್ಷಕಿ ಬಾಲಕಿಯ ಸಹಾಯಕ್ಕೆ ದಾವಿಸಿದ್ದಾರೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಬಾಲಕಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ.

Also Read
ಚೆನ್ನೈನಲ್ಲಿ ಸುಪ್ರೀಂಕೋರ್ಟ್‌ನ ಶಾಶ್ವತ ಪೀಠ ಸ್ಥಾಪನೆ ಬೇಡಿಕೆ: ಪ್ರಧಾನಿ ಮೋದಿಗೆ ಪತ್ರ ಬರೆದ ಸಿಎಂ ವಿಜಯ್ | CM Vijay
ದೆಹಲಿಯ ಶಾಲೆಯೊಂದರಲ್ಲಿ 9 ವರ್ಷದ ಬಾಲಕಿ ಹೃದಯಾಘಾತದಿಂದ ಸಾ* : ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ | girl dies

ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಕಿಯ ಸಾವಿಗೆ ಆರೋಗ್ಯ ಸಂಬಂಧಿತ ಸಮಸ್ಯೆಯೊಂದು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಹೃದಯಾಘಾತ ಎನ್ನಲಾಗಿದೆ. ಆದರೆ ಅದೇ ಕಾರಣ ಎಂದು ವೈದ್ಯರು ತಿಳಿಸಿಲ್ಲ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ (ಏಜೆನ್ಸೀಸ್).