ಉತ್ತರ ಪ್ರದೇಶ: ಭಾರತದಲ್ಲಿ ಮದುವೆಯಾಗುವ ಸಂಖ್ಯೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚಾಗಿ ವಿಚ್ಛೇದನಗಳ ಸಂಖ್ಯೆಯೇ ಅಧಿಕ. ಇದು ಆಘಾತಕಾರಿ ಸಂಗತಿಯಾದರೂ ತೀರ ಸಾಮಾನ್ಯ ಎನ್ನುವಂತಾಗಿದೆ. ಡಿವೋರ್ಸ್ ಪಡೆದ ತಕ್ಷಣ ನಿಟ್ಟುಸಿರು ಬಿಡುವ ದಂಪತಿಗಳು, ಒಬ್ಬರ ಮುಖವನ್ನು ಮತ್ತೊಬ್ಬರು ನೋಡದೆ ಕೋರ್ಟ್ನಿಂದ ಕಾಲ್ಕಿಳುತ್ತಾರೆ. ಇನ್ನೂ ಕೆಲವರು, ಪತಿ ಅಥವಾ ಪತ್ನಿ ಹಾಕಿರುವ ವಿಚ್ಛೇದನ ಅರ್ಜಿ ಉಲ್ಟಾ ಹೊಡೆಯಲಿ, ಅವರ ಮನಸ್ಸು ಬದಲಾಗಲಿ, ಎಲ್ಲವೂ ಮುಂಚಿನಂತೆ ಸರಿಯಾಗಿ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆದ್ರೆ, ಇಲ್ಲೊಬ್ಬ ಮಾತ್ರ ಡಿವೋರ್ಸ್ ಕೊಡಿಸಪ್ಪ ಎಂದು ದೇವರಿಗೆ ಹರಕೆ ಹೊತ್ತಿದ್ದು, ಅದು ಕಡೆಗೂ ನೆರವೇರಿದೆ.