8.7 ಕೋಟಿ ಯುವಕರು ಉದ್ಯೋಗ ವಂಚಿತ

Employment
Employment
Published on

ನವದೆಹಲಿ: ದೇಶದಲ್ಲಿ 15ರಿಂದ 29 ವರ್ಷದೊಳಗಿನ ಅಂದಾಜು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ನೀತಿ ಆಯೋಗದ ವರದಿ ತಿಳಿಸಿದೆ. "ವಿಕಸಿತ ಭಾರತ-2047"ಕ್ಕಾಗಿ ಕೌಶಲ್ಯಾಭಿವೃದ್ಧಿಯ ಮರುಕಲ್ಪನೆ ಎಂಬ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. 2021ರಲ್ಲಿ ನಡೆದ ರಾಷ್ಟ್ರೀಯ ಮಾದರಿ ಸಮೀಕ್ಷೆಯ 78ನೇ ಸುತ್ತಿನ ದತ್ತಾಂಶ ಆಧರಿಸಿ ಈ ಅಂದಾಜು ಮಾಡಲಾಗಿದೆ.

ಶಿಕ್ಷಣ ಮತ್ತು ಉದ್ಯೋಗದಿಂದ ಹೊರಗಿರುವ ಯುವಕರಿಗೆ ಕೈಗೆಟುಕುವ ಅಥವಾ ಸಬ್ಸಿಡಿ ಹೊಂದಿರುವ ತರಬೇತಿ ಕಾರ್ಯಕ್ರಮಗಳು ಅಗತ್ಯ. ಸ್ಥಳೀಯ ಉದ್ಯೋಗ ಬೇಡಿಕೆ ಹಾಗೂ ಉದಯೋನ್ಮುಖ ಕ್ಷೇತ್ರಗಳಿಗೆ ಹೊಂದಿಕೆಯಾಗುವ ತರಬೇತಿ, ಸ್ವಯಂ ಉದ್ಯೋಗದ ಅವಕಾಶ ಮತ್ತು ಮಧ್ಯಂತರ ಹಂತದ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು ಎಂದು ತಿಳಿಸಿದೆ.
ಪದವೀಧರರಲ್ಲಿ ಕೇವಲ ಶೇ. 8.25ರಷ್ಟು ಮಂದಿ ತಮ್ಮ ವಿದ್ಯಾರ್ಹತೆಗೆ ಹೊಂದಿಕೆಯಾಗುವ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾಯೋಗಿಕ ಕಲಿಕೆ ಮತ್ತು ಉದ್ಯಮಕ್ಕೆ ಅಗತ್ಯವಾದ ತರಬೇತಿಯ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. 2014-15ರಿಂದ 7.67 ಕೋಟಿಗೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net