ಒಂದು ಪ್ಲೇಟ್ ಮೋಮೋಗೆ 85 ಲಕ್ಷ! ಒಡವೆ ಮಾರಿ ಚಟ ತೀರಿಸಿಕೊಂಡ 14 ರ ಪೋರ | Momo
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮೋಮೋ ತಿನ್ನಲು ಒಡವೆ ಮಾರಿದ ಯುಪಿ ಬಾಲಕ
ಉಚಿತ ಮೋಮೋ ಆಸೆಗೆ 85 ಲಕ್ಷ ಮೌಲ್ಯದ ಆಭರಣ ಕದ್ದ ಹುಡುಗ
ಮೋಮೋ ಅಂಗಡಿ ಮಾಲೀಕನ ಮೇಲೆ ದೂರು ದಾಖಲಿಸಿದ ಬಾಲಕನ ತಂದೆ
ಉತ್ತರ ಪ್ರದೇಶ: ಈಗೀನ ಕಾಲದಲ್ಲಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ರಸ್ತೆ ಬದಿಯಲ್ಲಿ ಮಾರುವ ಚಾಟ್ಸ್ಗಳನ್ನು ಸೇವಿಸುವ ಬಯಕೆ, ಒಂದರ್ಥದಲ್ಲಿ ಚಟ ಇರುತ್ತದೆ. ಮನೆಯಲ್ಲಿ ಮಾಡುವ ತಿಂಡಿಗಳಿಗಿಂತ ಹೊರಗಿನ ಗೋಬಿ ಮಂಚೂರಿ, ಪಾನಿಪುರಿ, ಮೋಮೋ, ನೂಡೆಲ್ಸ್ ಇವೇ ಇವರಿಗೆ ಹೆಚ್ಚು ರುಚಿಸುತ್ತದೆ.
ಆದರೆ ಈ ಪಾಸ್ಟ್ಫುಡ್ ಗೀಳಿನಿಂದಾಗಿ ಮನೆಯಲ್ಲಿದ್ದ ಒಡವೆಯನ್ನು ಮಾರಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದಲ್ಲಿ 7ನೇ ತರಗತಿಯ ಬಾಲಕನೊಬ್ಬನ ಅತೀವ ಮೋಮೋ (Momo) ಪ್ರೀತಿ ಆಘಾತಕಾರಿ ತಿರುವು ಪಡೆದುಕೊಂಡಿದ್ದು, ತನಗೆ ಇಷ್ಟವಾದ ಮೋಮೋವನ್ನು ತಿನ್ನಲು ಮನೆಯಲ್ಲಿದ್ದ ಸುಮಾರು 85 ಲಕ್ಷ ಮೌಲ್ಯದ ಆಭರಣವನ್ನು ಅಂಗಡಿಯವನಿಗೆ ಮಾರಿದ್ದಾನೆ.
ಹುಡುಗನ ಮನೆಯ ಹತ್ತಿರವೇ ಮೋಮೋ ಅಂಗಡಿ ನಡೆಸುತ್ತಿದ್ದ ಮೂವರು ವ್ಯಕ್ತಿಗಳು, ಹುಡುಗನಿಗೆ ಮೋಮೋ ಮೇಲೆ ಅತೀವ ಪ್ರೀತಿ ಮತ್ತು ತಿನ್ನುವ ಹುಚ್ಚಿದೆ ಎಂದು ಗುರುತಿಸದ ಅವರು, ಹುಡುಗನಿಗೆ ಉಚಿನ ಮೋಮೋ ನೀಡುವ ಆಮಿಷವೊಡ್ಡಿ, ಮನೆಯಿಂದ ಆಭರಣವನ್ನು ತರುವಂತೆ ಮನವೋಲಿಸಿದ್ದಾರೆ.
ಈ ಪ್ರಕರಣವು ಉತ್ತರ ಪ್ರದೇಶದ ಡಿಯೋರಿಯಾ ನಗರದಲ್ಲಿ ನಡೆದಿದ್ದು, ವಾರಣಾಸಿಯ ದೇವಸ್ಥಾನದ ಅರ್ಚಕ ವಿಮ್ಲೇಶ್ ಮಿಶ್ರಾ ತಮ್ಮ ಮಗನಿಗಿದ್ದ ಮೋಮೋ ಹುಚ್ಚನ್ನು ಬಳಸಿಕೊಂಡು ಅಂಗಡಿಯವರು ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಂಗಡಿಯ ಮಾಲೀಕರು ತಮ್ಮ ಮಗನಿಗೆ ಮನೆಯಿಂದ ಆಭರಣಗಳನ್ನು ತಂದರೆ, ಅವನಿಗೆ ಉಚಿತ ಮೋಮೋ ನೀಡುವುದಾಗಿ ಹೇಳಿದ್ದರು ಎಂದು ವಿಮ್ಲೇಶ್ ಆರೋಪಿಸಿದ್ದಾರೆ. ನಿಧಾನವಾಗಿ, ಹುಡುಗ ತನ್ನ ಮನೆಯಿಂದ ಆಭರಣಗಳನ್ನು ತೆಗೆದುಕೊಂಡು ಅಂಗಡಿಯವರಿಗೆ ಹಸ್ತಾಂತರಿಸಿದ.
ವಿಮ್ಲೇಶ್ ಅವರ ಸಹೋದರಿ ಅವರ ಮನೆಗೆ ಭೇಟಿ ನೀಡಿ ತಮ್ಮ ಆಭರಣಗಳನ್ನು ಕೇಳಿದಾಗ, ಕಪಾಟು ತೆರೆದಾಗ ಎಲ್ಲವೂ ಕಾಣೆಯಾಗಿರುವುದನ್ನು ಕಂಡು ಕುಟುಂಬ ಗಾಬರಿಯಾಗಿದೆ. ಈ ಕುರಿತು ಹುಡುಗನಲ್ಲಿ ವಿಚಾರಿಸಿದಾಗ, ಆಭರಣಗಳನ್ನು ಮೋಮೋ ಮಾರಾಟಗಾರರಿಗೆ ನೀಡಿದ್ದು, ಅದರ ಬದಲು ಅವರು ಉಚಿನ ಮೋಮೋ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾನೆ.
ನಂತರ ಹುಡುಗನ ತಂದೆ ವಿಮ್ಲೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಮೂವರು ಆರೋಪಿಗಳ ಹೆಸರನ್ನು ಹೆಸರಿಸಿದರು. ಆಭರಣಗಳ ಪ್ರಸ್ತುತ ಮೌಲ್ಯ 85 ಲಕ್ಷ ರೂ. ಎಂದು ಅವರು ಹೇಳಿದ್ದಾರೆ. ದೂರಿನ ನಂತರ, ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದು ಶೀಘ್ರದಲ್ಲಿಯೇ ಮೋಮೋ ಅಂಗಡಿ ಮಾಲೀಕರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ,(ಏಜನ್ಸೀಸ್).