ನಾಗರಹಾವು ಕಚ್ಚಿದರೂ ಹೆದರದ 75ರ ವೃದ್ಧ: ಬೆರಳಿಗೆ ಕಚ್ಚಿದ ವಿಷಸರ್ಪವನ್ನೇ ಹಿಡಿದು ಆಸ್ಪತ್ರೆಗೆ ತಂದ ಅಜ್ಜ! Snake Bite

75 ವರ್ಷದ ವೃದ್ಧರು ತಮ್ಮ ಮನೆಯ ಹಿತ್ತಲಿನಲ್ಲಿರುವ ವಾಷಿಂಗ್ ಮಷಿನ್ ಬಳಿ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಟ್ಟೆಗಳ ನಡುವೆ ಅಡಗಿ ಕುಳಿತಿದ್ದ ವಿಷಕಾರಿ ನಾಗರಹಾವು ಏಕಾಏಕಿ ಅವರ ತೋರುಬೆರಳಿಗೆ ಕಚ್ಚಿದೆ.
Snake Bite
ನಾಗರಹಾವು ಕಚ್ಚಿದರೂ ಹೆದರದ 75ರ ವೃದ್ಧ: ಬೆರಳಿಗೆ ಕಚ್ಚಿದ ವಿಷಸರ್ಪವನ್ನೇ ಹಿಡಿದು ಆಸ್ಪತ್ರೆಗೆ ತಂದ ಅಜ್ಜ!
Published on: 

ತಿರುವನಂತಪುರಂ: ಸಾಮಾನ್ಯವಾಗಿ ಹಾವು ಕಚ್ಚಿದೆ ಎಂದಾಕ್ಷಣ ಜನರು ಭಯದಿಂದಲೇ ಅರ್ಧ ಜೀವ ಬಿಡುತ್ತಾರೆ. ಅದರಲ್ಲೂ ಅತ್ಯಂತ ವಿಷಕಾರಿ ನಾಗರಹಾವು ಕಚ್ಚಿದರೆ ಗಾಬರಿಯಿಂದ ಏನು ಮಾಡಬೇಕೆಂದೇ ತೋಚುವುದಿಲ್ಲ. ಹೀಗಿರುವಾಗ, ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ 75 ವರ್ಷದ ವೃದ್ಧರೊಬ್ಬರು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ತನಗೆ ಕಚ್ಚಿದ ನಾಗರಹಾವನ್ನು ( Snake Bite ) ನೋಡಿ ಭಯಪಡುವ ಬದಲು, ಅದನ್ನೇ ಹಿಡಿದು ಬಾಟಲಿಯಲ್ಲಿ ತುಂಬಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುವ ಮೂಲಕ ವೈದ್ಯರಿಗೇ ಅಚ್ಚರಿ ಮೂಡಿಸಿದ್ದಾರೆ.

ಈ ರೋಚಕ ಘಟನೆ ಪತ್ತನಂತಿಟ್ಟ ಜಿಲ್ಲೆಯ ಅಡೂರು ಸಮೀಪದ 14ನೇ ಮೈಲಿ ಎಂಬಲ್ಲಿ ನಡೆದಿದೆ. ಮಂಗಳವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ 75 ವರ್ಷದ ವೃದ್ಧರು ತಮ್ಮ ಮನೆಯ ಹಿತ್ತಲಿನಲ್ಲಿರುವ ವಾಷಿಂಗ್ ಮಷಿನ್ ಬಳಿ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಬಟ್ಟೆಗಳ ನಡುವೆ ಅಡಗಿ ಕುಳಿತಿದ್ದ ವಿಷಕಾರಿ ನಾಗರಹಾವು ಏಕಾಏಕಿ ಅವರ ತೋರುಬೆರಳಿಗೆ ಕಚ್ಚಿದೆ. ಹಾವು ಕಚ್ಚಿದ ತಕ್ಷಣ ತೀವ್ರ ನೋವು ಕಾಣಿಸಿಕೊಂಡರೂ ಅವರು ಸ್ವಲ್ಪವೂ ವಿಚಲಿತರಾಗಲಿಲ್ಲ.

Also Read
ಹೆಲ್ಮೆಟ್ ಧರಿಸಿದ್ರೂ ‘ಹೆಲ್ಮೆಟ್ ಇಲ್ಲ’ ಅಂತ ದಂಡ ಹಾಕಿದ​ ಪೊಲೀಸರು: ದೂರು ನೀಡಲು ಹೋದ ಅಕ್ಕ-ತಂಗಿಗೆ ಹೀಗಾಗಬಾರದಿತ್ತು! Traffic Challan
Snake Bite

ವೈದ್ಯರಿಗೆ ಯಾವ ಹಾವು ಕಚ್ಚಿದೆ ಎಂಬುದು ಸ್ಪಷ್ಟವಾಗಿ ತಿಳಿದರೆ ಚಿಕಿತ್ಸೆ ನೀಡುವುದು ಸುಲಭ ಎಂಬ ಉದ್ದೇಶದಿಂದ, ವೃದ್ಧರು ಅತ್ಯಂತ ಚಾಣಾಕ್ಷತನದಿಂದ ಆ ನಾಗರಹಾವನ್ನು ಹಿಡಿದು ಖಾಲಿ ಬಾಟಲಿಯೊಂದರಲ್ಲಿ ಸುರಕ್ಷಿತವಾಗಿ ತುಂಬಿದ್ದಾರೆ.

ಇದಾದ ಬಳಿಕ ಹಾವಿರುವ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡೇ ನೇರವಾಗಿ ಅಡೂರಿನ 'ಲೈಫ್‌ಲೈನ್ ಆಸ್ಪತ್ರೆ'ಗೆ ತೆರಳಿ ವೈದ್ಯರ ಮುಂದೆ ಇಟ್ಟಿದ್ದಾರೆ. ಹಾವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಒಂದು ಕ್ಷಣ ಬೆಚ್ಚಿಬಿದ್ದರೂ, ವೃದ್ಧರ ಸಮಯಪ್ರಜ್ಞೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಬೆಂಜು ಶಾಜಿ ವರ್ಗೀಸ್ ಹಾಗೂ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಡಾ. ಎಫ್. ಜಮೀಲ್ ಅವರು ವೃದ್ಧನಿಗೆ ಅಗತ್ಯವಾದ ಪ್ರತಿವಿಷ (ಆಂಟಿ-ವೆನಮ್) ಹಾಗೂ ತುರ್ತು ಚಿಕಿತ್ಸೆಯನ್ನು ನೀಡಿದ್ದಾರೆ.

Also Read
ಬುದ್ಧಿಗೊಂದು ಗುದ್ದು​! ಈ ಕೈಬರಹದಲ್ಲಿರುವ ತಪ್ಪನ್ನು ಗುರುತಿಸಿದರೆ ನೀವೇ ಜೀನಿಯಸ್​
Snake Bite

ಸಕಾಲಕ್ಕೆ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿರುವುದರಿಂದ ವೃದ್ಧರ ಆರೋಗ್ಯ ಸ್ಥಿತಿ ಈಗ ಸಂಪೂರ್ಣ ಸುಧಾರಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ, (ಏಜೆನ್ಸೀಸ್​).