ಸರ್ಕಾರದ ಇತ್ತೀಚಿನ ಆಡಳಿತಾತ್ಮಕ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಂಡ ಓವೈಸಿ, ಈ ಸರ್ಕಾರಕ್ಕೆ ಭಾರತೀಯರನ್ನು ಸದಾ ಯಾವುದಾದರೊಂದು ದಾಖಲೆ, ಕೆವೈಸಿ, ಎಸ್‌ಐಆರ್ ಅಥವಾ ಪೋರ್ಟಲ್‌ಗಳಿಗೆ ಡಾಕ್ಯುಮೆಂಟ್ ಅಪ್‌ಲೋಡ್ ಮಾಡುವ ಕೆಲಸದಲ್ಲಿ ನಿರತರಾಗಿರುವಂತೆ ಮಾಡಿ ಜನರ ಸಮಯ ವ್ಯರ್ಥ ಮಾಡುವುದೆಂದರೆ ಭಾರಿ ಇಷ್ಟ. ಆದರೆ, ದೇಶದ ಯುವಜನತೆಯ ಭವಿಷ್ಯ ನಿರ್ಧರಿಸುವ ಒಂದು ಸರಳವಾದ ನೀಟ್-ಯುಜಿ ೨೦೨೬ ಪರೀಕ್ಷೆಯನ್ನಾಗಲಿ ಅಥವಾ ಸಿಬಿಎಸ್‌ಇ ಒಎಸ್‌ಎಂ ವ್ಯವಸ್ಥೆಯನ್ನಾಗಲಿ ಸರಿಯಾಗಿ ನಡೆಸಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಚಾಟಿ ಬೀಸಿದ್ದಾರೆ. ಸಾಮಾನ್ಯ ಜನರನ್ನು ಸರ್ಕಾರ ತನಿಖೆ ಮಾಡುತ್ತದೆ, ಆದರೆ ಜನಸಾಮಾನ್ಯರು ಮಾತ್ರ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ ಎಂದು ಕಿಡಿಕಾರಿದ್ದಾರೆ.