ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ದತ್ತಾ, ಸುವೇಂದು ಅಧಿಕಾರಿ ಕನಿಷ್ಠ 5,000 ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಜೀವಗಳನ್ನು ಉಳಿಸಿದ್ದಾರೆ, ಮೇ 6 ರಂದು ಅವರ ಪಿಎ ಮೇಲೆ ಗುಂಡು ಹಾರಿಸಲಾಯಿತು. ಆ ರಾತ್ರಿ ಅವರು ಸೇಡು ತೀರಿಸಿಕೊಳ್ಳಲು ಕರೆ ನೀಡಿದ್ದರೆ, 5,000 ಟಿಎಂಸಿ ಕಾರ್ಯಕರ್ತರು ಹತ್ಯೆಯಾಗುತ್ತಿದ್ದರು. ಆದರೆ ಅವರು ಶಾಂತಿ ಕಾಪಾಡಲು ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದರು ಎಂದು ದತ್ತಾ ತಿಳಿಸಿದ್ದಾರೆ.