ಜನರಲ್ಲಿ ಆತಂಕ ಮೂಡಿಸಿದ 500 ನೋಟ್​ ಬ್ಯಾನ್: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು..?

500 Note Ban
500 Note Ban
Published on
ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ವಾಟ್ಸಾಪ್‌ನಲ್ಲಿ "ಮಾರ್ಚ್ 2026ರೊಳಗೆ 500 ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗುವುದು" ಎಂಬ ವದಂತಿ ವೇಗವಾಗಿ ಹರಡುತ್ತಿದೆ. ಕೆಲವು ಪೋಸ್ಟ್‌ಗಳು ಮತ್ತು ವೀಡಿಯೋಗಳು ಈಗಾಗಲೇ ಎಟಿಎಂಗಳಿಂದ 500 ನೋಟುಗಳ ವಿತರಣೆಯನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳುತ್ತಿವೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ.ಆದರೆ, ಕೇಂದ್ರ ಸರ್ಕಾರ ಇದೀಗ ಸ್ಪಷ್ಟನೆ ಕೊಟ್ಟಿದೆ.
ಕೇಂದ್ರ ಸರ್ಕಾರ ಅಧಿಕೃತ ಫ್ಯಾಕ್ಟ್-ಚೆಕ್ ಘಟಕವಾದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (PIB) ಈ ಎಲ್ಲ ಆರೋಪಗಳನ್ನು ಸಂಪೂರ್ಣ ಸುಳ್ಳು ಎಂದು ತಳ್ಳಿಹಾಕಿದೆ. ಜನವರಿ 2026ರಲ್ಲಿ PIB ತನ್ನ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿ ಸ್ಪಷ್ಟಪಡಿಸಿದೆ: "ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಚ್ 2026ಕ್ಕೆ 500 ನೋಟುಗಳ ಚಲಾವಣೆಯನ್ನು ನಿಲ್ಲಿಸುವಂತಹ ಯಾವುದೇ ಘೋಷಣೆ ಮಾಡಿಲ್ಲ. ಈ ಹೇಳಿಕೆ ಸಂಪೂರ್ಣ ಸುಳ್ಳು. 500 ನೋಟುಗಳು ಕಾನೂನುಬದ್ಧ ಚಲಾವಣೆಯಲ್ಲಿ ಉಳಿಯಲಿವೆ ಮತ್ತು ಮುಂದುವರಿಯಲಿವೆ.
"ಈ ವದಂತಿಗಳು ಹಲವು ಬಾರಿ ಹರಡಿವೆ. 2025ರ ಜೂನ್ ಮತ್ತು ಜುಲೈಯಲ್ಲೂ ಇಂತಹ ಸುಳ್ಳು ಸುದ್ದಿಗಳು ವೈರಲ್ ಆಗಿದ್ದವು. ಆಗಲೂ PIB ಸ್ಪಷ್ಟನೆ ನೀಡಿತ್ತು. ಈ ವದಂತಿಗಳ ಹಿಂದೆ RBIಯ ಒಂದು ಸರ್ಕುಲರ್ ತಪ್ಪಾಗಿ ಅರ್ಥೈಸಿಕೊಳ್ಳುವುದು ಕಾರಣ.
ಹಣಕಾಸು ಸಚಿವಾಲಯವೂ 2025ರಲ್ಲಿ ಸಂಸತ್‌ಗೆ ಉತ್ತರಿಸಿ, 500 ನೋಟುಗಳ ಪೂರೈಕೆ ಅಥವಾ ಎಟಿಎಂ ವಿತರಣೆ ನಿಲ್ಲಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದೆ. 500 ನೋಟುಗಳು ಸಂಪೂರ್ಣ ಕಾನೂನುಬದ್ಧವಾಗಿ ಚಲಾವಣೆಯಲ್ಲಿರುವುದು ಮುಂದುವರಿಯಲಿದೆ ಎಂದು ಹೇಳಿದ್ದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net