50 ರೂ. ಲಂಚಕ್ಕೆ ಬೇಸರ ವ್ಯಕ್ತಪಡಿಸಿದ್ದ IPS ಅಧಿಕಾರಿ ವಿರುದ್ಧ 1 ಕೋಟಿ ಲಂಚದ ಆರೋಪ! ಸಂದರ್ಶನದ ವಿಡಿಯೋ ವೈರಲ್​! IPS Officer Rahul Bansal

50 ರೂ. ಲಂಚಕ್ಕೆ ಬೇಸರ ವ್ಯಕ್ತಪಡಿಸಿದ್ದ IPS ಅಧಿಕಾರಿ ವಿರುದ್ಧ 1 ಕೋಟಿ ರೂ. ಲಂಚ ಪಡೆದ ಆರೋಪ
50 ರೂ. ಲಂಚಕ್ಕೆ ಬೇಸರ ವ್ಯಕ್ತಪಡಿಸಿದ್ದ IPS ಅಧಿಕಾರಿ ವಿರುದ್ಧ 1 ಕೋಟಿ ರೂ. ಲಂಚ ಪಡೆದ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • 50 ರೂ. ಲಂಚಕ್ಕೆ ಬೇಸರ ವ್ಯಕ್ತಪಡಿಸಿದ್ದ IPS ಅಧಿಕಾರಿ ವಿರುದ್ಧ 1 ಕೋಟಿ ರೂ. ಲಂಚ ಪಡೆದ ಆರೋಪ
  • ತರಬೇತಿ ಐಪಿಎಸ್​ ಅಧಿಕಾರಿ ರಾಹುಲ್​ ಬನ್ಸಲ್​​ ವಿರುದ್ಧ ಲಂಚದ ಆರೋಪ
  • ಸೈಬರ್​ ಅಪರಾಧವನ್ನು ಮುಚ್ಚಾಕಲು ಒಂದು ಕೋಟಿ ಡಿಮ್ಯಾಂಡ್​
ಛತ್ತೀಸ್‌ಗಢ: ಕಾನೂನನ್ನು ಪಾಲನೇ ಮಾಡಬೇಕಾದರವೇ ಕಾನೂನನ್ನು ಮೀರಿರುವ ಘಟನೆವೊಂದು ಬೆಳಕಿಗೆ ಬಂದಿದೆ. ಕೇಡರ್‌ನ 2022 ರ ಬ್ಯಾಚ್‌ನ ತರಬೇತಿ ಐಪಿಎಸ್ ಅಧಿಕಾರಿ (IPS Officer Rahul Bansal) ಯೊಬ್ಬರು ಸೈಬರ್ ವಂಚನೆ ಪ್ರಕರಣವನ್ನು ಇತ್ಯರ್ಥಪಡಿಸಲು ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಕೇವಲ ಐಪಿಎಸ್ ಅಧಿಕಾರಿಯಷ್ಟೇ ಅಲ್ಲದೆ, ಈ ಹಗರಣದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯ ಹೆಸರು ಕೂಡ ಪ್ರಮುಖವಾಗಿ ಕೇಳಿಬಂದಿದೆ. ಸದ್ಯ ಈ ಪ್ರಕರಣವನ್ನು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯದ ಮೆಟ್ಟಿಲೇರಿದ್ದು, ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ.

ಹವಾಲಾ ಮಾರ್ಗದ ಮೂಲಕ ಹಣ ವರ್ಗಾವಣೆ!

ದೂರಿನಲ್ಲಿ ಉಲ್ಲೇಖಿಸಿರುವಂತೆ, ಈ ಒಟ್ಟು 1 ಕೋಟಿ ರೂಪಾಯಿ ಮೊತ್ತವನ್ನು ಒಂದೇ ಬಾರಿಗೆ ನಗದಾಗಿ ಪಡೆದಿಲ್ಲ. ಬದಲಿಗೆ, ಮೇ ತಿಂಗಳಲ್ಲಿ ತಲಾ 50 ಲಕ್ಷ ರೂಪಾಯಿಗಳಂತೆ ಎರಡು ಪ್ರತ್ಯೇಕ ಕಂತುಗಳಲ್ಲಿ ಹವಾಲಾ ಮಾರ್ಗದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಸೈಬರ್ ಕ್ರೈಮ್ ಪ್ರಕರಣವೊಂದನ್ನು ಮುಚ್ಚಿಹಾಕಲು ಅಥವಾ ದಾರಿತಪ್ಪಿಸಲು ಈ ಭಾರಿ ಮೊತ್ತದ ಡೀಲ್ ನಡೆಸಲಾಗಿದೆ ಎನ್ನಲಾಗುತ್ತಿದೆ.

ಡಿಜಿಟಲ್ ಸಾಕ್ಷ್ಯಗಳ ಸ್ಫೋಟ


ಆರೋಪಿಗಳ ವಿರುದ್ಧ ಕೇವಲ ಮೌಖಿಕ ಆರೋಪಗಳಷ್ಟೇ ಅಲ್ಲದೆ, ದೂರುದಾರರು ಬಲವಾದ ಡಿಜಿಟಲ್ ಪುರಾವೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಎರಡೂ ಕಡೆಯವರ ನಡುವೆ ನಡೆದಿದೆ ಎನ್ನಲಾದ ವಾಟ್ಸಾಪ್ ಚಾಟ್‌ಗಳು ಮತ್ತು ಆಡಿಯೋ ಕರೆ ರೆಕಾರ್ಡಿಂಗ್‌ಗಳು ಸದ್ಯ ದೆಹಲಿ ವಿಶೇಷ ಸಿಬಿಐ ನ್ಯಾಯಾಲಯದ ಕೈ ಸೇರಿವೆ.
ಈ ಎಲ್ಲ ಸಾಕ್ಷ್ಯಗಳನ್ನು ಪರಿಗಣಿಸಿರುವ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದ್ದು, ಛತ್ತೀಸ್‌ಗಢ ಪೊಲೀಸ್ ಮಹಾನಿರ್ದೇಶಕರು ಹಾಗೂ ಕೇಂದ್ರ ತನಿಖಾ ದಳದ ನಿರ್ದೇಶಕರಿಂದ ಕೂಡಲೇ ಕ್ರಮ ತೆಗೆದುಕೊಂಡ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವೈರಲ್ ಆಗುತ್ತಿರುವ ಹಳೆಯ ವಿಡಿಯೋ!


ಸದ್ಯ ಈ ಸುದ್ದಿ ಹೊರಬೀಳುತ್ತಿದ್ದಂತೆ, ಐಪಿಎಸ್ ಅಧಿಕಾರಿ ರಾಹುಲ್ ಬನ್ಸಾಲ್ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹಿಂದೆ ಸಿವಿಲ್ ಸರ್ವೀಸ್ ಮಾಕ್ ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ್ದ ಅವರು, ತಮ್ಮ ಕುಟುಂಬದ ಕೆಲಸವೊಂದಕ್ಕೆ ಪಂಚಾಯತ್ ಅಧಿಕಾರಿಯೊಬ್ಬರು ಕೇವಲ 50 ರೂ. ಅಥವಾ 500 ರೂ. ಲಂಚ ಕೇಳಿದ್ದಕ್ಕೆ ತಮಗೆ ಬೇಸರವಾಗಿತ್ತು ಎಂದು ಭಾವುಕರಾಗಿ ವಿವರಿಸಿದ್ದರು. ಇಂದು ಅದೇ ಅಧಿಕಾರಿ ಕೋಟ್ಯಂತರ ರೂಪಾಯಿ ಲಂಚದ ಆರೋಪ ಹೊತ್ತು ಸಂಕಷ್ಟಕ್ಕೆ ಸಿಲುಕಿದ್ದು, ವಿದಿಯಾಟ ಎಂದು ನೆಟ್ಟಿಗರು ಹೀಯಾಳಿಸುತ್ತಿದ್ದಾರೆ, (ಏಜನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net