ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಂಬೈ ಪೊಲೀಸರು, 5 ವರ್ಷದ ಬಾಲಕಿಯ ಅಪಹರಣ ಮತ್ತು ಕಳ್ಳಸಾಗಣೆ ಪ್ರಕರಣದಲ್ಲಿ ವಕೋಲಾ ಠಾಣೆಯ ಪೊಲೀಸರು ಮಗುವನ್ನು ಪನ್ವೇಲ್‌ನಲ್ಲಿ ಪತ್ತೆಹಚ್ಚಿ ಐದು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ತನಿಖೆಯಿಂದ ಬಾಲಕಿಯ ಮಾವ ಮತ್ತು ಆತನ ಪತ್ನಿ ಮಧ್ಯರಾತ್ರಿ ಅಪಹರಿಸಿ 90,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಖರೀದಿದಾರ ಮಗುವನ್ನು ಇನ್ನೊಬ್ಬ ವ್ಯಕ್ತಿಗೆ 1,80,000 ರೂ.ಗೆ ಮರುಮಾರಾಟ ಮಾಡಿದ್ದಾನೆ. ತ್ವರಿತವಾಗಿ ಕಾರ್ಯನಿರ್ವಹಿಸಿದ ಬಾಲಕಿಯನ್ನು ಪನ್ವೇಲ್‌ನಿಂದ ರಕ್ಷಿಸಿ ಸುರಕ್ಷಿತವಾಗಿ ಆಕೆಯ ತಾಯಿಯೊಂದಿಗೆ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).