ಆದರೆ, ಗೂಗಲ್‌ನಲ್ಲಿ ನಾವು ಏನನ್ನು ಬೇಕಾದರೂ ಹುಡುಕಬಹುದು ಎಂದುಕೊಂಡರೆ ಅದು ನಮ್ಮ ಮೂರ್ಖತನವಾಗುತ್ತದೆ. ಗೂಗಲ್‌ನಲ್ಲಿ ಕೆಲವು ನಿರ್ದಿಷ್ಟ ವಿಷಯಗಳನ್ನು ಹುಡುಕುವುದು ಕಾನೂನುಬದ್ಧವಾಗಿ ಅಪರಾಧವಾಗಿದ್ದು, ಕಠಿಣ ಜೈಲು ಶಿಕ್ಷೆಗೆ ಗುರಿ ಮಾಡಬಹುದು. ಅಷ್ಟೇ ಅಲ್ಲದೆ, ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಲು ಮತ್ತು ಗೌಪ್ಯತೆಗೆ ಭಾರಿ ಧಕ್ಕೆ ತರಲು ನಿಮ್ಮ ಒಂದು ತಪ್ಪು ಸರ್ಚ್ ಕಾರಣವಾಗಬಹುದು! ಹಾಗಿದ್ದರೆ, ಗೂಗಲ್‌ನಲ್ಲಿ ಎಂದಿಗೂ ಹುಡುಕಬಾರದ ಐದು ವಿಷಯಗಳನ್ನು ನಾವಿಂದು ತಿಳಿಸಲಿದ್ದೇವೆ.