ಆನ್​ಲೈನ್​ ವಂಚನೆಯಿಂದ ತಪ್ಪಿಸಿಕೊಳ್ಳಲು ಯುಐಡಿಎಐ ನೀಡಿದ 5 ಪ್ರಮುಖ ಎಚ್ಚರಿಕೆಗಳಿವು! ಇಲ್ಲಿದೆ ಉಪಯುಕ್ತ ಮಾಹಿತಿ | UIDAI

ಆಧಾರ್​ ಕಾರ್ಡ್​
ಆಧಾರ್​ ಕಾರ್ಡ್​
Published on

ಪ್ರಮುಖ ಮುಖ್ಯಾಂಶಗಳು

  • ಆನ್‌ಲೈನ್ ವಂಚನೆ ತಡೆಗಟ್ಟಲು UIDAI ನೀಡಿರುವ ಪ್ರಮುಖ ಎಚ್ಚರಿಕೆಗಳಿವು
  • ಹೊಸ ವೈಶಿಷ್ಟ್ಯಗಳೊಂದಿಗೆ ಆಧಾರ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಗುರುತನ್ನು ಸುರಕ್ಷಿತಗೊಳಿಸಲಾಗಿದೆ
  • ಆಧಾರ್ ವಿವರಗಳು ಸೋರಿಕೆಯಾದರೆ ಸೈಬರ್ ವಂಚನೆಯ ಅಪಾಯ ಹೆಚ್ಚು
  • ಆಧಾರ್ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ನವದೆಹಲಿ: ಇತ್ತೀಚೆಗೆ ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಹೊಸ ವೈಶಿಷ್ಟ್ಯಗಳೊಂದಿಗೆ ನೂತನ ಆಧಾರ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಈ ಅಪ್ಲಿಕೇಶನ್ ಸಹಾಯದಿಂದ ಇನ್ಮುಂದೆ ಸರ್ಕಾರಿ ಕಚೇರಿ ಅಥವಾ ಇತರೆ ಕೆಲಸಗಳಿಗೆ ಕಾರ್ಡ್​ ಕೊಂಡೊಯ್ಯುವ ಅಗತ್ಯವಿಲ್ಲ. ಕಾರಣ, ಎಲ್ಲವೂ ಈಗ ಡಿಜಿಟಲೀಕರಣವಾಗಿದೆ. 
ಆಧಾರ್ ಕಾರ್ಡ್‌ಗಳನ್ನು ಒದಗಿಸುವ UIDAI ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ಭಾರತೀಯ ಬಳಕೆದಾರರಿಗೆ ಪ್ರಮುಖ ಎಚ್ಚರಿಕೆಗಳನ್ನು ನೀಡಿವೆ. ಡಿಜಿಟಲ್ ಗುರುತನ್ನು ಸುರಕ್ಷಿತವಾಗಿರಿಸಲು ಮತ್ತು ಆನ್‌ಲೈನ್ ವಂಚಕರಿಂದ ವಂಚನೆಗೆ ಒಳಗಾದಂತೆ ಇರಲು ಸಂಸ್ಥೆ ಐದು ಪ್ರಮುಖ ಸೂಚನೆಗಳನ್ನು ನೀಡಿದೆ. 

1. ಆಧಾರ್ ಕಾರ್ಡ್ ರಕ್ಷಣೆ

ನಿಮ್ಮ ಆಧಾರ್ ವಿವರಗಳು ಹ್ಯಾಕರ್‌ಗಳ ಕೈಗೆ ಸಿಕ್ಕರೆ, ಅವುಗಳನ್ನು ಆನ್‌ಲೈನ್ ವಂಚನೆ, ಸೈಬರ್ ವಂಚನೆ ಮತ್ತು ಇತರೆ ವಂಚನೆಗಳಿಗೆ ಬಳಸಿಕೊಳ್ಳುವ ಅಪಾಯವಿದೆ. ಆಧಾರ್ ಅನೇಕ ಪ್ರಮುಖ ಸೇವೆಗಳಿಗೆ ಒಂದು ಆಧಾರ ಎಂದು ಸಂಸ್ಥೆ ಹೇಳಿದೆ. ಹೀಗಾಗಿಯೇ, ಕಾರ್ಡ್​ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಒಳಿತು.
2. ಈ ತಪ್ಪನ್ನು ಎಂದಿಗೂ ಮಾಡಬೇಡಿ!
ನಿಮ್ಮ ಆಧಾರ್ OTP (ಒನ್​ ಟೈಮ್​ ಪಾಸ್‌ವರ್ಡ್) ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಯಾರೋ ಬ್ಯಾಂಕ್ ಹೆಸರಿನಲ್ಲಿ ಅಥವಾ ಇನ್ಯಾವುದಕ್ಕೋ ಕೇಳಿದರೆಂದು ಹಂಚಿಕೊಳ್ಳುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿಯ ದುರುಪಯೋಗಕ್ಕೆ ಕಾರಣವಾಗಬಹುದು. ಇದೊಂದು ಒಟಿಪಿ ಇಲ್ಲದೆ, ಯಾರೂ ನಿಮ್ಮ ಆಧಾರ್ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ. 

3. ಮಾಸ್ಕ್ಡ್ ಆಧಾರ್ ಕಾರ್ಡ್

ಹಲವು ಯೋಜನೆಗಳು ಮತ್ತು ಸೇವೆಗಳಿಗೆ ಆಧಾರ್ ಅಗತ್ಯ. ಪ್ರಮುಖ ಸೇವೆಗಳಿಗೆ ಮಾಸ್ಕ್ಡ್ ಆಧಾರ್ ಕಾರ್ಡ್ ಅನ್ನು ಬಳಸಲು ಸಂಸ್ಥೆ ಶಿಫಾರಸು ಮಾಡುತ್ತದೆ. ಇದರಲ್ಲಿ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಕೆಲವು ಅಂಕಿಗಳು ಮಾತ್ರ ಕಾಣಿಸುತ್ತೆ. ಇದು ನಿಮ್ಮ ಆಧಾರ್ ಸಂಖ್ಯೆಯನ್ನು ಗೌಪ್ಯವಾಗಿಡುವುದರ ಜತೆಗೆ ಆನ್‌ಲೈನ್ ವಂಚನೆಯಿಂದ ನಿಮಗಾಗುವ ತೊಂದರೆಯನ್ನು ತಪ್ಪಿಸುತ್ತದೆ. 

4. ಫಿಂಗರ್‌ಪ್ರಿಂಟ್ ಲಾಕ್

ನೀವು UIDAI ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ನಿಮ್ಮ ಆಧಾರ್‌ನಲ್ಲಿ “ಫಿಂಗರ್‌ಪ್ರಿಂಟ್ ಲಾಕ್” ಅನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು​. ಹೀಗೆ ಮಾಡುವುದರಿಂದ ನಿಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಫಿಂಗರ್‌ಪ್ರಿಂಟ್, ಐರಿಸ್ ಮತ್ತು ಫೇಸ್​ ಐಡೆಂಟಿಫಿಕೆಶೇನ್ ಡೇಟಾವನ್ನು ಲಾಕ್ ಮಾಡುತ್ತದೆ. ಇದು ಯಾರೊಬ್ಬರೂ ದುರುಪಯೋಗ ಪಡಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.

5. ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ

ನಿಮ್ಮ ಆಧಾರ್ ಕಾರ್ಡ್‌ನ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಅಥವಾ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್​ ಮಾಡುವುದು ಬೇಡ. ಹಾಗೆ ಮಾಡುವುದರಿಂದ, ನಿಮ್ಮ ವೈಯಕ್ತಿಕ ವಿವರಗಳು ಇತರರಿಗೆ ಬಹಿರಂಗಗೊಳ್ಳುವ ಅಪಾಯ ಹೆಚ್ಚು.

6. ಸಹಾಯವಾಣಿ ಸಂಖ್ಯೆಗಳನ್ನು ಬಳಸಿ

ನೀವು ಈಗಾಗಲೇ ವಂಚನೆ ಅಥವಾ ಸೈಬರ್ ಅಪರಾಧಕ್ಕೆ ಸಿಲುಕಿದ್ದರೆ, ತಕ್ಷಣ ಕ್ರಮ ತೆಗೆದುಕೊಳ್ಳಿ. ಇದಕ್ಕಾಗಿ ನೀವು ಯುಐಡಿಎಐ ಸಹಾಯವಾಣಿ ಸಂಖ್ಯೆ 1947 ಮತ್ತು ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಬಹುದು. ಈ ಸಂಖ್ಯೆಗಳಿಗೆ ತಕ್ಷಣ ಕರೆ ಮಾಡಿ, ದೂರು ದಾಖಲಿಸುವುದರಿಂದ ಮುಂದಿನ ಅಪಾಯವನ್ನು ತಪ್ಪಿಸಬಹುದು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net