ಈ ಹಿನ್ನೆಲೆಯಲ್ಲಿ ಜಾಗೃತ ನಾಗರಿಕ ದುರ್ಗಾದಾಸ್ ಲಂಬ್ ಅವರು ಬೀಡ್ ಜಿಲ್ಲಾಧಿಕಾರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಭ್ರಷ್ಟ ಗುತ್ತಿಗೆದಾರರು ಹಾಗೂ ಇದಕ್ಕೆ ಕೈಜೋಡಿಸಿದ ಇಂಜಿನಿಯರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಇನ್ನು ವಿಶೇಷವೆಂದರೆ, ಈ ಕಳಪೆ ಸೇತುವೆ ನಿರ್ಮಾಣವಾಗಿರುವುದು ಆಡಳಿತ ಪಕ್ಷದ ಬಿಜೆಪಿ ಶಾಸಕಿ ನಮಿತಾ ಮುಂದಾಡಾ ಅವರ ವಿಧಾನಸಭಾ ಕ್ಷೇತ್ರದಲ್ಲಿ ಎನ್ನುವುದು ಇಲ್ಲಿ ಗಮನಾರ್ಹ.