ಇದರ ಜೊತೆಗೆ, ವಯೋಸಹಜ ದೌರ್ಬಲ್ಯ, ತೀವ್ರ ಅನಾರೋಗ್ಯ, ವಿಕಲಚೇತನತೆ ಅಥವಾ ಶಾರೀರಿಕ ತೊಂದರೆಗಳಿಂದ ಬಳಲುತ್ತಿರುವವರು ಇಂತಹ ಸೇವೆಯನ್ನು ಬಳಸುವುದು ಅನಿವಾರ್ಯ ಎಂಬುದನ್ನು ಬಳಕೆದಾರ ಸ್ಪಷ್ಟಪಡಿಸಿದ್ದಾರೆ. ಆದರೆ, ಕೇವಲ ಸಾರಿಗೆಗಾಗಿ ಅಥವಾ ಶ್ರಮ ವಹಿಸಲು ಇಷ್ಟವಿಲ್ಲದೆ ಮನುಷ್ಯರನ್ನು ವಾಹನದಂತೆ ಬಳಸಿಕೊಳ್ಳುವ ಮಾನಸಿಕತೆ ಮತ್ತು ಆ ಕಲ್ಪನೆಯೇ ಸರಿ ಇಲ್ಲ ಎಂಬುದು ಅವರ ಪ್ರತಿಪಾದನೆಯಾಗಿದೆ.