ನಿನ್ನ ನೋಡಿದ್ರೆ ಮೂಡ್, ಫೀಲಿಂಗ್ಸ್​ ಬರ್ತಿಲ್ಲ..,ಮದುವೆ ಬೇಡ ಎಂದ ಭಾವಿ ಪತಿ; ಡೆತ್​ನೋಟ್ ಬರೆದಿಟ್ಟು ಯುವತಿ ಸೂಸೈಡ್..Andhra Pradesh

Andhra Pradesh Woman Suicide
Andhra Pradesh Woman Suicide
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವತಿ, 12 ಪುಟ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ
  • ಭಾವಿ ಪತಿಯಿಂದಲೇ ಮದುವೆ ಬೇಡ ಎನ್ನುವ ಟಾರ್ಚರ್​..ಮನನೊಂದು ನೇಣಿಗೆ ಶರಣು
  • ನನಗೆ ಗರ್ಲ್​ಫ್ರೆಂಡ್ಸ್ ಇದ್ದಾರೆ ನೀನು ಬೇಡ ಎಂದು ನಿರಾಕರಿಸಿದ್ದ ಶಹಜಾನ್ ಬಂಧನ
ವಿಜಯವಾಡ: ನಿಶ್ಚಿತಾರ್ಥ ಮಾಡಿಕೊಂಡ ನಂತರ ಮದುವೆ ಬೇಡ.. ನಿನ್ನ ನೋಡಿದ್ರೆ ಮೂಡ್​ ಬರೋದಿಲ್ಲ ಎಂದು ನಿರಾಕರಿಸಿದ್ದಕ್ಕೆ ಮನನೊಂದು ಯುವತಿಯೊಬ್ಬರು 12 ಪೇಜ್​ಗಳ ಡೆತ್​ ನೋಟ್​ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
26 ವರ್ಷದ ರೆಹನಾ ಇತ್ತೀಚೆಗೆ ಎಂಎಸ್​​ಸಿ ಮುಹಿಸಿಕೊಂಡಿದ್ದರು. ಫೆಬ್ರವರಿ 15ರಂದು ಕಡಪ ಜಿಲ್ಲೆಯ ಪ್ರೊದ್ದಟೂರು ಮೂಲದ ಬೆಂಗಳೂರು ಮೂಲದ ಟೆಕ್ಕಿ ಶಹಜಾನ್​ರೊಂದಿಗೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಆಗಸ್ಟ್​ನಲ್ಲಿ ಇಬ್ಬರಿಗೆ ಮದುವೆ ನಿಗದಿಯಾಗಿತ್ತು.

ಆಗಸ್ಟ್​ನಲ್ಲಿ ಮದುವೆ

ಎಂಗೇಜ್ಮೆಂಟ್ ನಂತರ ಇಬ್ಬರ ಮಧ್ಯೆ ಬಾಂಧವ್ಯ ಚೆನ್ನಾಗಿಯೇ ಇತ್ತು..ಇಬ್ಬರು ರಾತ್ರಿ ಹತ್ತು ಹನ್ನೆರಡು ಗಂಟೆಯವರೆಗೂ ಮಾತನಾಡುತ್ತಿದ್ದರು. ಮೆಸೇಜ್ ಮಾಡಿಕೊಳ್ಳುತ್ತಿದ್ದರು., ಆದರೆ, ಬರುಬರುತ್ತಾ ಆತನ ನಡವಳಿಕೆಯಲ್ಲಿ ಬದಲಾವಣೆ ಶುರುವಾಯಿತು.ಆತ ಮದುವೆ ಬೇಡ ಎಂದು ಒತ್ತಡ ಹೇರಲು ಶುರು ಮಾಡಿದ್ದ. ಇದೇ ಕಾರಣದಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಕುಟುಂಬಸ್ಥರು ದೂರು ನೀಡಿದ್ದಾರೆ.

ಮೂಡ್ ಬರಲ್ಲ ಮದುವೆ ಬೇಡ

ನಿನ್ನ ಬಗ್ಗೆ ಯಾವುದೇ ಭಾವನೆಗಳು ನನಗೆ ಉಳಿದುಕೊಂಡಿಲ್ಲ. ನನಗೆ ಈಗಾಗಲೇ ನಾಲ್ಕು ಗರ್ಲ್​​ಫ್ರೆಂಡ್ಸ್ ಇದ್ದಾರೆ. ಅದು ಬೇರೆ ನಿನ್ನನ್ನು ನೋಡಿದ್ರೆ ಮೂಡ್​ ಸಹ ಬರೋದಿಲ್ಲ ಎಂದು ಹೇಳಿಕೊಂಡಿದ್ದನಂತೆ. ಮದುವೆ ನಿಶ್ಚಯವಾದ ನಂತರವೂ ಆತ ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದನಂತೆ ಮೊದಲು ಇದು ತಮಾಷೆ ಎಂದು ತಿಳಿದು ಸುಮ್ಮನಾಗುತ್ತಿದ್ದ ಆಕೆ..ಸುಮ್ಮನಾಗುತ್ತಿದ್ದಳು. ಆದರೆ, ಆತ ಮಾತ್ರ ತನ್ನ ಆಟ ಮುಂದುವರೆಸಿದ್ದ. ಗಂಭೀರವಾಗಿ ಮಾತನಾಡಲು ನಿರ್ಧರಿಸಿದ್ದ.

12 ಪುಟ ಡೆತ್​​ನೋಟ್

ಶಹಜಾನ್​ನ ಈ ವರ್ತನೆ ತಾಳಲಾರದೆ 12 ಪುಟ ಡೆತ್​​ನೋಟ್​ ಬರೆದಿಟ್ಟು ಆಕೆ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಡೆತ್​ ನೋಟ್​ ವಶಪಡಿಸಿಕೊಂಡಿದ್ದು, ರೆಹನಾಳ ತಂದೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೆಹನಾಳು ಮೃತಪಟ್ಟಿದ್ದಾಳೆ ಎಂಬ ವಿಚಾರ ಹಾಗೂ ಆಕೆಯ ಪೋಷಕರು ಶಹಜಾನ್​ ಮೇಲೆ ದೂರು ನೀಡಿದ್ದಾರೆ ಎಂದು ತಿಳಿಯುತ್ತಲೇ ಶಹಜಾನ್​​ ನಾಪತ್ತೆಯಾಗಿದ್ದ. ಆತನ ಹುಡುಕಾಟಕ್ಕೆ ಬಲೆ ಬೀಸಿದ್ದ ಪೊಲೀಸರು ಸದ್ಯ ಶಹಜಹಾನ್ ಮತ್ತು ಆತನ ಪೋಷಕರಾದ ಎಂ ವೀರಯ್ಯ ಮತ್ತು ಎಂ ವಹೀದಾರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಎಂದು ಚಿನ್ನ ಚೌಕ್ ಸಬ್ ಇನ್ಸ್‌ಪೆಕ್ಟರ್ ಪ್ರತಾಪ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net