1 ದಿನ ರಜೆ ಹಾಕಿದರೆ ಸಾಕು, 4 ದಿನ ಫುಲ್ ಮಜಾ: 2026ರ ಲಾಂಗ್ ವೀಕೆಂಡ್ ಲಿಸ್ಟ್ ಇಲ್ಲಿದೆ..

Weekend
Weekend
Published on
ಬೆಂಗಳೂರು: ಹೊಸ ವರ್ಷ 2026 ರಜಾ ಪ್ರಿಯರಿಗೆ ಸಿಹಿ ಸುದ್ದಿ ತಂದಿದೆ. ರಾಷ್ಟ್ರೀಯ ಹಾಗೂ ಧಾರ್ಮಿಕ ರಜಾದಿನಗಳು ವೀಕೆಂಡ್‌ಗಳೊಂದಿಗೆ ಸೇರಿ ಹಲವು ದೀರ್ಘ ವೀಕೆಂಡ್‌ಗಳನ್ನು ಸೃಷ್ಟಿಸಿವೆ.ಕೇವಲ ಒಂದು ಅಥವಾ ಎರಡು ದಿನ ರಜೆ ಹಾಕುವ ಮೂಲಕ ನೀವು ಸುಂದರವಾದ ಪ್ರವಾಸಗಳನ್ನು ಕೈಗೊಳ್ಳಬಹುದು.
ಹೌದು, ಈ ವರ್ಷ ಜನವರಿ, ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಅತಿ ಹೆಚ್ಚು ಲಾಂಗ್ ವೀಕೆಂಡ್ ಅವಕಾಶಗಳಿವೆ.

ಪ್ರವಾಸದ ಯೋಜನೆ ಹೀಗಿದೆ..

ಜನವರಿ: ನ್ಯೂ ಇಯರ್ (ಜ.1, ಗುರುವಾರ) – ಜ.2 ಲೀವ್ ತೆಗೆದುಕೊಂಡರೆ(ಶನಿವಾರ-ಭಾನುವಾರ) 4 ದಿನಗಳ ರಜೆ (ಜ.1-4). ರಿಪಬ್ಲಿಕ್ ಡೇ (ಜ.26, ಸೋಮವಾರ) – ಸಹಜ 3 ದಿನಗಳ ಲಾಂಗ್ ವೀಕೆಂಡ್.
ಮಾರ್ಚ್ ಹಬ್ಬಗಳ ಸುಗ್ಗಿ: ಮಾರ್ಚ್ 31 (ಮಹಾವೀರ ಜಯಂತಿ) ಮಂಗಳವಾರ ಬಂದಿದೆ. ಮಾರ್ಚ್ 30ರ ಸೋಮವಾರ ರಜೆ ಹಾಕಿದರೆ, ಶನಿವಾರದಿಂದ ಮಂಗಳವಾರದವರೆಗೆ 4 ದಿನಗಳ ರಜೆ ಸಿಗುತ್ತದೆ.
ಏಪ್ರಿಲ್: ಗುಡ್ ಫ್ರೈಡೇ (ಏ.3, ಶುಕ್ರವಾರ) – ನೇರ 3 ದಿನಗಳ ರಜೆ.
ಆಗಸ್ಟ್: ಇಂಡಿಪೆಂಡೆನ್ಸ್ ಡೇ (ಆ.15) ಸುತ್ತಲೂ ಉತ್ತಮ ಅವಕಾಶಗಳು.
ಅಕ್ಟೋಬರ್ ಸಂಭ್ರಮ: ಅಕ್ಟೋಬರ್ 20 (ದಸರಾ) ಮಂಗಳವಾರ ಬಂದಿದೆ. ಅಕ್ಟೋಬರ್ 19ರ ಸೋಮವಾರ ರಜೆ ಪಡೆದರೆ, ಸತತ 4 ದಿನಗಳ ಕಾಲ ಮೈಸೂರು ದಸರಾ ಅಥವಾ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು.
ನವೆಂಬರ್: ದೀಪಾವಳಿ ಮತ್ತು ಗುರು ನಾನಕ್ ಜಯಂತಿ ಸುತ್ತಲೂ ವಿಸ್ತೃತ ರಜೆ.
ಡಿಸೆಂಬರ್: ಕ್ರಿಸ್ಮಸ್ (ಡಿ.25, ಶುಕ್ರವಾರ) – 3 ದಿನಗಳ ಸಹಜ ಲಾಂಗ್ ವೀಕೆಂಡ್.
ಮುಂಗಡ ಬುಕ್ಕಿಂಗ್: ದೀರ್ಘ ವಾರಾಂತ್ಯಗಳಲ್ಲಿ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಆದ್ದರಿಂದ ಹೋಟೆಲ್ ಮತ್ತು ಪ್ರಯಾಣದ ಟಿಕೆಟ್‌ಗಳನ್ನು ಕನಿಷ್ಠ 2-3 ತಿಂಗಳು ಮುಂಚಿತವಾಗಿ ಬುಕ್ ಮಾಡುವುದು ಉತ್ತಮ.
ಈ ಪಟ್ಟಿ ರಾಷ್ಟ್ರೀಯ ರಜೆಗಳ ಆಧಾರದಲ್ಲಿದ್ದು, ರಾಜ್ಯಗಳಲ್ಲಿ ಸ್ಥಳೀಯ ರಜೆಗಳು (ಉದಾ. ಗಣೇಶ ಚತುರ್ಥಿ, ಈದ್) ಹೆಚ್ಚುವರಿ ಅವಕಾಶ ನೀಡಬಹುದು. ಮುಂಗಡವಾಗಿ ಬುಕ್ಕಿಂಗ್ ಮಾಡಿ, ಗೋವಾ, ಮಣಾಲಿ, ಜೈಪುರ ಅಥವಾ ಕೇರಳಕ್ಕೆ ಟ್ರಿಪ್ ಪ್ಲ್ಯಾನ್ ಮಾಡಬಹುದು. ಹೀಗಾಗಿ, 2026 ಟ್ರಾವೆಲ್‌ಗೆ ಪರ್ಫೆಕ್ಟ್ ಇಯರ್ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net