ಮಾತು ಕೇಳಿಲ್ಲ ಅಂತ ಹೀಗಾ ಶಿಕ್ಷೆ ಕೊಡುವುದು?; 3 ವರ್ಷದ ಮಗುವಿನ ಪುಟ್ಟ ಕೈಗೆ ಹಗ್ಗ ಕಟ್ಟಿ, ತಳ್ಳಾಡಿ ಕಿರುಕುಳ ನೀಡಿದ ಇಬ್ಬರ ವಿರುದ್ಧ ಕೇಸ್..Tamil Nadu

ಎಐ ಚಿತ್ರ
ಎಐ ಚಿತ್ರ
Published on: 
  • ಮೂರು ವರ್ಷದ ಬಾಲಕನ ಕೈಗೆ ಹಗ್ಗ ಕೊಟ್ಟಿ ಹಿಂಸೆ ಕೊಟ್ಟ ಶಾಲಾ ಶಿಕ್ಷಕಿ

  • ಶಾಲಾ ಶಿಕ್ಷಕಿ, ಮಹಿಳಾ ಅಟೆಂಡರ್ ವಿರುದ್ಧ ಕೇಸ್, ಇಬ್ಬರೂ ಕೆಲಸದಿಂದ ವಜಾ

  • ಕೈಗೆ ಹಗ್ಗ ಕಟ್ಟಿ ಭಾರಿ ಹಿಂಸೆ ಕೊಟ್ಟ ಶಾಲಾ ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್

ತಿರುಚ್ಚಿ: ಶಿಕ್ಷಕಿಯ ಮಾತು ಕೇಳಿಲ್ಲ ಎನ್ನುವ ಸಿಟ್ಟಿಗೆ ತಮಿಳುನಾಡಿನ ತಿರುವರೂರು ಜಿಲ್ಲೆಯ ತಿರುವರೈಪೂಂಡಿಯ ಖಾಸಗಿ ಶಾಲೆಯೊಂದರ ತರಗತಿಯಲ್ಲಿ ಮೂರು ವರ್ಷದ ವಿದ್ಯಾರ್ಥಿಯ ಕೈಗಳನ್ನು ಹಗ್ಗದಿಂದ ಕಟ್ಟಿಹಾಕಿ, ತಳ್ಳಾಡಿ ಕಿರುಕುಳ ಕೊಟ್ಟ ಘಟನೆ ಬೆಳಕಿಗೆ ಬಂದಿದೆ.

ಬಾಲಕನ ಪೋಷಕರು ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರರು ಶಿಕ್ಷಕಿ ಆರ್ ಬ್ಯಾಕಿಯಲಕ್ಷ್ಮಿ (26) ಮತ್ತು ನೈರ್ಮಲ್ಯ ಕಾರ್ಯಕರ್ತೆ ಎಂ ಸೆಲ್ವಿ (55) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನಿಗೆ ಹಿಂಸೆ ಕೊಟ್ಟಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ತಿರುತುರೈಪೂಂಡಿಯಲ್ಲಿ ಟ್ರಾವೆಲ್ಸ್ ಕಂಪನಿ ನಡೆಸುತ್ತಿರುವ ಬಾಲಕನ ತಂದೆ ಬಿ ಗೋಪಿನಾಥ್, ಸೋಮವಾರ ಮನೆಗೆ ಬಂದಾಗ ಮಗು ದೇಹದ ಮೇಲೆ ಗಾಯವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಶಿಕ್ಷಕಿ ಹೊಡೆದಿದ್ದು ಗೊತ್ತಾಗಿದೆ.

ಗೋಪಿನಾಥ್ ಶಾಲೆಗೆ ಹೋಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವೀಕ್ಷಿಸಲು ಒತ್ತಾಯಿಸಿದರು. ವೀಡಿಯೊದಲ್ಲಿ, ಮಗುವಿನ ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ, ಏಳಲು ಪರದಾಡುತ್ತಿರುವುದು ಕಂಡುಬಂದಿದೆ. ಮತ್ತೊಂದು ದೃಶ್ಯದಲ್ಲಿ, ತನ್ನನ್ನು ತಾನು ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಮಗು ಹಗ್ಗವನ್ನು ಕಚ್ಚುತ್ತಿರುವಂತೆ ಕಾಣಿಸುತ್ತದೆ. ಶಾಲೆಯ ಮಹಿಳಾ ಅಟೆಂಡರ್ ಮಗುವನ್ನು ಗೋಡೆಗೆ ನೇತುಹಾಕಿದ್ದ ಡಿಜಿಟಲ್ ಬ್ಯಾನರ್‌ಗೆ ತಳ್ಳುತ್ತಿರುವುದು ಇತ್ತು ಇದನ್ನು ಅವರು ಫೋನ್​ನಲ್ಲಿ ರೆಕಾರ್ಡ್ ಮಾಡಿಕೊಂಡು, ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿರುತುರೈಪೂಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ಏನಂದ್ರು?

ಪೊಲೀಸರ ಪ್ರಕಾರ, ಮಗು ತುಂಟತನ ಮಾಡುತ್ತಿತ್ತು ಮತ್ತು ಶಿಕ್ಷಕಿಯ ಮಾತನ್ನು ಕೇಳುತ್ತಿರಲಿಲ್ಲ ಎಂಬ ಕಾರಣಕ್ಕೆ ಮಹಿಳಾ ಅಟೆಂಡರ್ ಮಗುವನ್ನು ವಿನೈಲ್ ಶೀಟ್‌ನಲ್ಲಿ ಸುತ್ತಿ ಕಟ್ಟಿಹಾಕಿದ್ದಾರೆ ಎನ್ನಲಾಗಿದೆ. ಅಟೆಂಡರ್ ಅಪರಾಧಿ. ಮಗು ತುಂಟತನ ಮಾಡುತ್ತಿತ್ತು ಮತ್ತು ಶಿಕ್ಷಕಿಯ ಮಾತನ್ನು ಕೇಳುತ್ತಿರಲಿಲ್ಲ ಎಂಬ ಕಾರಣಕ್ಕೆ ಅವರು ಹೀಗೆ ಮಾಡಿದ್ದಾರೆ. ವಿನೈಲ್ ಶೀಟ್‌ನಲ್ಲಿ ಸುತ್ತಿದಾಗ ಮಗು ಕೆಳಗೆ ಬಿದ್ದಂತಿದ್ದು, ಕಣ್ಣಿನ ಬಳಿ ಗಾಯವಾಗಿದೆ, ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಯು ಇಬ್ಬರೂ ಸಿಬ್ಬಂದಿಯನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ, (ಏಜೆನ್ಸೀಸ್).