ಮಾಹಿತಿ ಪ್ರಕಾರ, ಸಬಿಲಾ ಖತೂನ್ ಎಂದು ಗುರುತಿಸಲಾಗಿದೆ. ಸಬಿಲಾ ಅವರ ಸಹೋದರ ಮೊಹಮ್ಮದ್ ಗುಲಾಬ್ ಮನೆಗೆ ಬಂದಾಗ, ಸಹೋದರಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಮನೆಯಲ್ಲಿ ಅವರ ಪತಿ ಮೊಹಮ್ಮದ್ ಲಾಲ್ಬಾಬು ಹಾಗೂ ಮಗು ಇರಲಿಲ್ಲ. ಸಬಿಲಾ ಸುಮಾರು ಎರಡು ವರ್ಷಗಳ ಹಿಂದೆ ಮೊಹಮ್ಮದ್ ಲಾಲ್ಬಾಬು ಜತೆ ಮದುವೆಯಾಗಿದ್ದರು. ಬಳಿಕ ಇಬ್ಬರೂ ದೆಹಲಿಯ ಪ್ರಹ್ಲಾದ್ಪುರ ಬಂಗರ್ ಗ್ರಾಮದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.