ನಕಲಿ ಮದ್ಯ ಸೇವಿಸಿ 22 ಜನರ ಬಲಿ: ರಾಸಾಯನಿಕ ನೀಡಿದ್ದ ಅಪ್ಪ-ಮಗ ಅರೆಸ್ಟ್​; 440 ಕಡೆ ದಾಳಿ, 333 ಬಂಧನ, 84 ಲಕ್ಷದ ಮಾಲು ವಶ! Pune Liquor Tragedy

ನಕಲಿ ಮದ್ಯ ಸೇವಿಸಿ ಪುಣೆಯಲ್ಲಿ 22 ಜನ ಮರಣ
ನಕಲಿ ಮದ್ಯ ಸೇವಿಸಿ ಪುಣೆಯಲ್ಲಿ 22 ಜನ ಮರಣ
Published on

ಪ್ರಮುಖ ಮುಖ್ಯಾಂಶಗಳು

  • ನಕಲಿ ಮದ್ಯ ಸೇವಿಸಿ ಪುಣೆಯಲ್ಲಿ 22 ಜನ ಮರಣ
  • ನಕಲಿ ಮದ್ಯ ತಯಾರಿಕೆ ರಾಸಾಯನಿಕ ಒದಗಿಸಿದ್ದ ಅಪ್ಪ-ಮಗ ಅರೆಸ್ಟ್​
  • ಅಬಕಾರಿ ಅಧಿಕಾರಿಗಳಿಂದ 440 ಕಡೆ ದಾಳಿ, 333 ಬಂಧನ, 84 ಲಕ್ಷ ಮೌಲ್ಯದ ಮದ್ಯ ಜಫ್ತಿ
ಪುಣೆ: ಕಳೆದ ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ-ಚಿಂಚ್‌ವಾಡದಲ್ಲಿ ನಕಲಿ ಮದ್ಯ ಸೇವನೆಯಿಂದಾಗಿ ಸುಮಾರು 22 ಜನ ಮೃತಪಟ್ಟ ಘಟನೆ (Pune Liquor Tragedy) ನಡೆದಿತ್ತು.
ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧ್ಯ ತಯಾರಿಕೆಗೆ ರಾಸಾಯನಿಕವನ್ನು ನೀಡಿದ ಇಬ್ಬರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅರುಣ್ ಜಗದಂಬಾ ಚೌಬೆ (59) ಮತ್ತು ಅವರ ಪುತ್ರ ಅಭಿಷೇಕ್ ಅರುಣ್ ಚೌಬೆ (24) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಮದ್ಯ ವಿಷಪೂರಿತವಾಗಲು ಕಾರಣವಾದ ರಾಸಾಯನಿಕಗಳನ್ನು ಒದಗಿಸಿದ ಹಿನ್ನಲೆ ಬಂಧನ ನಡೆದಿದ್ದು, ಪಿಂಪ್ರಿ ನ್ಯಾಯಾಲಯ ನಾಲ್ಕು ದಿನಗಳ ಸಿಐಡಿ ಕಸ್ಟಡಿಯನ್ನು ವಿಧಿಸಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಅಕ್ರಮ ಮಧ್ಯ ತಯಾರಿಕೆಗೆ ಸರ್ಕಾರ ಬ್ರೇಕ್​!

ನಕಲಿ ಮದ್ಯ ಸೇವನೆಯಿಂದ 22 ಜನ ಮರಣ ಹೊಂದಿದ ತರುವಾಯ ಮಹಾರಾಷ್ಟ್ರ ಸರ್ಕಾರ ಈ ಪ್ರಕರಣದ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿದೆ. ಹಾಗೂ ರಾಜ್ಯದಲ್ಲಿ ತಯಾರಾಗುತ್ತಿರುವ ನಕಲಿ ಮಧ್ಯ ತಯಾರಕಾ ಜಾಲವನ್ನು ಬೇಧಿಸುವಂತೆ ಸೂಚನೆ ನೀಡಿದೆ.
ಇದರ ಹಿನ್ನಲೆ ಈ ನಕಲಿ ಮದ್ಯ ತಯಾರಕರ ಕಿಂಗ್​ಪಿನ್​ ಎಂದು ಗುರುತಿಸಲಾಗಿರುವ ಯೋಗೇಶ್​ ವಾಂಖಡೆ ಎಂಬಾತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಅಬಕಾರಿ ಇಲಾಖೆ ಅಧಿಕಾರಿಗಳು ರಾಜ್ಯದ ಸುಮಾರು 440 ಸ್ಥಳಗಳಲ್ಲಿ ದಾಳಿ ಮಾಡಿ ಸುಮಾರು 333 ಅಕ್ರಮ ಮದ್ಯ ತಯಾರಕರನ್ನು ಬಂಧಿಸಿರುವುದಗಿ ತಿಳಿದು ಬಂದಿದೆ.
ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಸುಮಾರು 1.61 ಲಕ್ಷ ಲೀಟರ್​ ಹಾನಿಕಾರಕ ರಾಸಾಯನಿಕವನ್ನು ವಶಕ್ಕೆ ಪಡೆಯಲಾಗಿದೆ. ಅಂತೆಯೇ ಈ ರಾಸಾಯನಿಕ ಬಳಸಿ ತಯಾರಿಸಲಾದ 9, 686 ಲೀಟರ್​ ನಕಲಿ ಮದ್ಯವನ್ನು ಸಹ ಜಫ್ತಿ ಮಾಡಲಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 83.24 ಲಕ್ಷ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net