ಬಿಜೆಪಿ ವಿರುದ್ಧ ಆರ್ಯ-ದ್ರಾವಿಡ ಅಸ್ತ್ರ.. ಮುಂದಿನ ಚುನಾವಣೆ ಸಂಸ್ಕೃತಿ ರಕ್ಷಿಸುವ ಯುದ್ಧ ಎಂದ ಸ್ಟಾಲಿನ್ | MK Stalin
MK Stalin | ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್
Published on:
Copied
Follow Us
ದೆಹಲಿ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
1960 ರ ಸಮಯದಲ್ಲಿನ ಹಿಂದಿ ವಿರೋಧಿ ಆಂದೋಲನಗಳಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಆಚರಿಸಲಾದ ಭಾಷಾ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ಮುಂಬರುವ ದಿನಗಳಲ್ಲಿ ಆರ್ಯ-ದ್ರಾವಿಡ ಯುದ್ಧದ ಹೊಸ ರೂಪವನ್ನು ನೋಡಲಿದೆ ಎಂದು ಹೇಳಿದರು.
ಕೆಲವೇ ವಾರಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದು ತಮಿಳು ಭಾಷೆ, ಸಂಸ್ಕೃತಿ ಮತ್ತು ಗುರುತನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ರಾಜಕೀಯ ಶಕ್ತಿಗಳನ್ನು ಸೋಲಿಸಲು ಒಂದು ಯುದ್ಧಭೂಮಿಯಾಗಲಿದೆ ಎಂದು ಸ್ಟಾಲಿನ್ ಹೇಳಿದರು.
ಮಾದಕ ದ್ರವ್ಯ ದುರುಪಯೋಗದ ಕುರಿತು ಪ್ರಧಾನಿಯವರ ಹೇಳಿಕೆಗೆ ತಿರುಗೇಟು ನೀಡಿದ ಸ್ಟಾಲಿನ್, ಮೋದಿ ತಮಿಳುನಾಡಿನ ಬಗ್ಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ, ನಿಜ ಹೇಳುವುದಾದರೆ ಬಿಜೆಪಿ ಆಡಳಿತದಲ್ಲಿರುವ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ದೊಡ್ಡ ಮಾದಕ ದ್ರವ್ಯ ಪತ್ತೆ ನಡೆದಿದೆ ಎಂದರು.
ಮಹಿಳೆಯರ ಸುರಕ್ಷತೆಯ ಕುರಿತು ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಟಾಲಿನ್, ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 11 ಜನರನ್ನು ಬಿಡುಗಡೆ ಮಾಡಿದ್ದು ನಿಮ್ಮ ಗುಜರಾತ್ ಸರ್ಕಾರ. ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ? ಎಂದು ಪ್ರಶ್ನಿಸಿದರು.
ಮೋದಿ ತಮಿಳುನಾಡಿಗೆ ಬಂದಾಗ ಸೂರ್ಯ ಅಡಗಿ ಮಳೆ ಬಂತು ಎಂದು ಇಪಿಎಸ್ ಹೇಳಿಕೊಂಡಿದ್ದಾರೆ, ನೀವು ನಿಮ್ಮ ಜೀವನದುದ್ದಕ್ಕೂ ನಮಸ್ಕರಿಸುತ್ತಿದ್ದರೆ, ಸೂರ್ಯನನ್ನು ಹೇಗೆ ನೋಡುತ್ತೀರಿ? ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು(ಏಜೆನ್ಸೀಸ್).