ಕ್ರಿಕೆಟ್‌ನಿಂದ ದೂರವಿದ್ದ ಆ ಐದು ವರ್ಷಗಳಲ್ಲಿ ಶಿವಂ ದುಬೆ ಅವರ ದೈಹಿಕ ಸ್ಥಿತಿ ಹದಗೆಟ್ಟಿತ್ತು. ಆರ್ಥಿಕ ಸಮಸ್ಯೆಗಳನ್ನು ಸರಿಪಡಿಸುವ ಹೊತ್ತಿಗೆ ಶಿವಂ ಅವರ ತೂಕ 110 ಕೆಜಿಗೆ ಏರಿತ್ತು. ಆತಿಯಾದ ತೂಕದ ವ್ಯಕ್ತಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿ, ಅಂತಾರಾಷ್ಟ್ರೀಯ ಮಟ್ಟದ ಆಲ್‌ರೌಂಡರ್ ಆಗುವುದು ಯಾರಿಗಾದರೂ ಅಸಾಧ್ಯವೆಂದೇ ಎನಿಸುತ್ತಿತ್ತು. ಆದರೆ, ಅಲ್ಲಿ ತಂದೆಯ ನಂಬಿಕೆ ಮತ್ತು ಮಗನ ಪರಿಶ್ರಮ ಒಂದಾಯಿತು. ಮಗನ ತೂಕ ಇಳಿಸಲು ತಂದೆ ಮತ್ತೆ ಬೆನ್ನೆಲುಬಾಗಿ ನಿಂತರು. ಜಿಮ್, ಕಠಿಣ ತರಬೇತಿ ಮತ್ತು ಆಹಾರ ಪದ್ಧತಿಯಿಂದ ದುಬೆ ಮತ್ತೆ ಫಿಟ್ನೆಸ್ ಮರಳಿ ಪಡೆದರು.