

ನವದೆಹಲಿ: ಫುಕೆಟ್-ದೆಹಲಿ ವಿಮಾನದಲ್ಲಿ ನಡೆದ ಅಪಘಾತದ ಬೆನ್ನಲ್ಲೇ ಕಾರ್ಯಪ್ರವೃತ್ತಿಯಲ್ಲಿ ತೊಡಗಿರುವ ಏರ್ ಇಂಡಿಯಾ
(Air India)
ಸಂಸ್ಥೆ ನಡೆಸಿದ ಪ್ರಾಥಮಿಕ ಡ್ರಗ್ ಪರೀಕ್ಷೆಯಲ್ಲಿ ಮತ್ತಿಬ್ಬರು ಪೈಲಟ್‌ಗಳು ವಿಫಲರಾಗಿದ್ದಾರೆ. ಆದಾಗ್ಯೂ, ಅಂತಿಮ ತಪಾಸಣೆಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಈ ಇಬ್ಬರೂ ಪೈಲಟ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ಕೆಳಗಿಳಿಸಲಾಗಿದೆ.