ಯಾವ ಊರಿನ ಚೆಲುವೆ ಈಕೆ? ಈ ವರ್ಷದ ‘ಮಿಸ್ ಯುನಿವರ್ಸ್ ಇಂಡಿಯಾ’ ಕಿರೀಟಕ್ಕೆ ಮುತ್ತಿಟ್ಟ ಕಾಜಿಯಾ ಲಿಜ್ | Miss Universe India 2026

ವಿಶ್ವ ಸುಂದರಿ ಕಾಜಿಯಾ ಲಿಜ್ ಮೇಜೊ
ವಿಶ್ವ ಸುಂದರಿ ಕಾಜಿಯಾ ಲಿಜ್ ಮೇಜೊ
Published on

ಪ್ರಮುಖ ಮುಖ್ಯಾಂಶಗಳು

  • ‘ಮಿಸ್ ಯುನಿವರ್ಸ್ ಇಂಡಿಯಾ 2026’ ಪಟ್ಟ ಪಡೆದ ಕೇರಳದ ಕುವರಿ
  • 19 ವರ್ಷದ ಕಾಜಿಯಾ ಲಿಜ್ ಮೇಜೊ ಈಗ ವಿಶ್ವ ಸುಂದರಿ
  • ಬೆಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿ ಆಗಿರುವ ಕೇರಳಂನ ಮೊದಲ ವಿಶ್ವ ಸುಂದರಿ
Miss Universe India: ಭಾನುವಾರ (ಆ.23) ಜೈಪುರದಲ್ಲಿ ‘ಮಿಸ್ ಯುನಿವರ್ಸ್ ಇಂಡಿಯಾ 2026’ ಪಟ್ಟಕ್ಕೆ ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಗೆದ್ದ ಕೇರಳದ 19 ವರ್ಷದ ಕಾಜಿಯಾ ಲಿಜ್ ಮೇಜೊ (Kaziah Liz Mejo) ಈಗ 'ವಿಶ್ವ ಸುಂದರಿ' ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 
ಒಟ್ಟು 52 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದ ಈ ಚೆಲುವೆ ಮೂಲತಃ ಕೇರಳವದರು. ಮುಂಬರುವ ನವೆಂಬರ್‌ನಲ್ಲಿ ಪೋರ್ಟೊ ರಿಕೋದಲ್ಲಿ ನಡೆಯಲಿರುವ 75ನೇ ಮಿಸ್ ಯುನಿವರ್ಸ್ ಜಾಗತಿಕ ಸ್ಪರ್ಧೆಯಲ್ಲಿ ಕಾಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಮತ್ತೊಂದು ವಿಶೇಷ. ಸ್ಪರ್ಧೆಯಲ್ಲಿ, ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದರೆ, ಗುಜರಾತ್‌ನ ಅನುಶ್ರಿ ಸತಾವಲೇಕರ್ ದ್ವಿತೀಯ ರನ್ನರ್-ಅಪ್ ಆಗಿ ಮಿಸ್ ಇಂಟರ್‌ನ್ಯಾಷನಲ್ ಇಂಡಿಯಾ 2026 ಪ್ರಶಸ್ತಿ ಸ್ವೀಕರಿಸಿದರು.

ಯಾರೀ ಕಾಜಿಯಾ ಲಿಜ್ ಮೇಜೊ?

ವಿಶ್ವ ಸುಂದರಿ ಪಟ್ಟ ಪಡೆದಿರುವ ಕಾಜಿಯಾ ಲಿಜ್​, 'ಮಿಸ್ ಯುನಿವರ್ಸ್ ಇಂಡಿಯಾ' ಕಿರೀಟ ಧರಿಸಿದ ಮೊದಲ ಮಲಯಾಳಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2007ರಲ್ಲಿ ಜನಿಸಿದ ಈ ಚೆಲುವೆ, ತಮ್ಮ ಬಾಲ್ಯವನ್ನು ಅಬುಧಾಬಿಯಲ್ಲಿ ಕಳೆದು, ಶಿಕ್ಷಣವನ್ನೂ ಅಲ್ಲಿಯೇ ಪೂರೈಸಿದ್ದಾರೆ. ಪ್ರಸ್ತುತ, ಬೆಂಗಳೂರಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಗೈದಿರುವ ಕೇರಳದ ಕುವರಿ, 17ನೇ ವಯಸ್ಸಿಗೆ 'ಮಿಸ್ ಟೀನ್ ದೀವಾ 2024' ಗೆದ್ದಿದ್ದಾರೆ. ಇನ್ನು, 2025ರ 'ಮಿಸ್ ಟೀನ್ ಇಂಟರ್‌ನ್ಯಾಷನಲ್' ಸ್ಪರ್ಧೆಯಲ್ಲಿ ಪ್ರಥಮ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದ ಇವರು, ಈಗ 2026ರಲ್ಲಿ 'ಮಿಸ್ ಯುನಿವರ್ಸ್' ಕಿರೀಟ ಮುಡಿಗೇಡಿರಿಸಿಕೊಂಡಿರುವುದು ಹಲವರ ಮೆಚ್ಚುಗೆ, ಪ್ರಶಂಸೆಗೆ ಕಾರಣವಾಗಿದೆ.

ವಿವಿಧ ಕಲೆಗಳಲ್ಲಿ ಪಾರಂಗತ

12 ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡಿರುವ ಕಾಜಿಯಾ, ಗಾಯಕಿ, ವೈಯಲಿನ್ ನುಡಿಸುವುದು ಹಾಗೂ ಡ್ರಮ್ಸ್ ವಾದಕಿಯೂ ಹೌದು. ಮಲಯಾಳಂನ 'ಶೈಲಾಕ್' ಚಿತ್ರದ ಮೂಲಕ ನಟನೆಗೂ ಪದಾರ್ಪಣೆ ಮಾಡಿರುವುದು ಗಮನಾರ್ಹ,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net