'ನಾನು ಆಯ್ಕೆಯಾಗಲಿಲ್ಲ'; ನಾಗ್ಪುರದಲ್ಲಿ 17 ವರ್ಷದ ಉದಯೋನ್ಮುಖ ಕ್ರಿಕೆಟ್​ ಆಟಗಾರ್ತಿ ಸೂಸೈಡ್​.. Nagpur

Aspiring Woman Cricketer Dies By Suicide
Aspiring Woman Cricketer Dies By Suicide
Published on
Aspiring Woman Cricketer: ಪ್ರಾದೇಶಿಕ ಕ್ರಿಕೆಟ್​​ ಅಸೋಸಿಯೇಷನ್ ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ಮನನೊಂದು  17 ವರ್ಷದ ಉದಯೋನ್ಮುಖ ಕ್ರಿಕೆಟ್​ ಆಟಗಾರ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. 
ಅದಿತಿ ಮೋರೇಶ್ವರ್​​ ಚೌಕಂಡೆ ಮೃತ ಯುವತಿ ಎಂದು ಗುರುತಿಸಲಾಗಿದೆ.  ಮಹಾರಾಷ್ಟ್ರದ ಅಕೋಲಾ ಮೂಲದ ಈಕೆ ಕ್ರಿಕೆಟ್‌ನಲ್ಲಿ ವೃತ್ತಿಜೀವನ ನಡೆಸಲು ತನ್ನ ತಾಯಿಯೊಂದಿಗೆ ನಾಗ್ಪುರಕ್ಕೆ ಬಂದು ಲಕ್ಷ್ಮಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಇತ್ತೀಚೆಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದಳು ಎಂದು ಬಜಾಜ್​ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಕಾರಣ ಏನು?

ಪ್ರತಿಷ್ಠಿತ ವಿದರ್ಭ ಕ್ರಿಕೆಟ್​​ ಅಸೋಸಿಯೇಷನ್​ ತಂಡಕ್ಕೆ ಆಯ್ಕೆಯಾಗಿಯೇ ತೀರಬೇಕು ಎನ್ನುವ ಗುರಿ ಹೊಂದಿದ್ದ ಈಕೆ  ಎರಡು ವರ್ಷಗಳ ಕಾಲ ಕಠಿಣ ತರಬೇತಿ ಪಡೆಯುತ್ತಿದ್ದಳು. ಆದರೆ, ದುರದೃಷ್ಟವಶಾತ್​​​ ತಂಡದಲ್ಲಿ ಆಕೆ ಆಯ್ಕೆಯಾಗದೆ ಮಾನಸಿಕವಾಗಿ ನೊಂದಿದ್ದಳು. ಇದೇ ಬೇಸರದಲ್ಲಿ ಆಕೆ ಡೆತ್​ನೋಟ್​​ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಪೊಲೀಸರು ಏನಂದ್ರು?

ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ  ಬಜಾಜ್​ ನಗರ ಪೊಲೀಸರು, ಸಂತ್ರಸ್ತೆಯ ಡೆತ್​ ನೋಟ್​​  ವಶಕ್ಕೆ ಪಡೆದುಕೊಂಡಿದ್ದಾರೆ.  ಕಳೆದ ಎರಡಯ ವರ್ಷದಿಂದ ಅದಿತಿ ಬಿಸಿಸಿಐ ಸಂಯೋಜಿತ ಕ್ರಿಕೆಟ್ ಅಕಾಡೆಮಿಗೆ ಪ್ರವೇಶ ಪಡೆಯುವ ಮತ್ತು ಉನ್ನತ ಮಟ್ಟದಲ್ಲಿ ಆಡುವ ಭರವಸೆಯಿಂದ ನಾಗ್ಪುರದ ಸರ್ವ್ ಕ್ರಿಕೆಟ್ ಅಕಾಡೆಮಿಯಲ್ಲಿ  ಅಭ್ಯಾಸ ಮಾಡುತ್ತಿದ್ದರು. ಆಕೆಯ ಸಹೋದರ ಪ್ರಬಲ್ ಕ್ರಿಕೆಟ್​​ ಆಟಗಾರ. ಅವರೊಂದಿಗೆ ಆಕೆ ಕೂಡ ತರಬೇತಿ ಪಡೆಯುತ್ತಿದ್ದರು. ಬುಧವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡಿದ ಬಳಿಕ ಅತಿ ತನ್ನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆ ಸಮಯದಲ್ಲಿ ಪ್ರಬಲ್ ಊರಿನಲ್ಲಿರಲಿಲ್ಲ ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಡೆತ್​ನೋಟ್​ನಲ್ಲಿ ಹೀಗಿತ್ತು

"ದಾದಾ, ನೀನು ತುಂಬಾ ಚೆನ್ನಾಗಿ ಕ್ರಿಕೆಟ್​​ ಆಡುತ್ತೀಯ. ನೀನು ಬಹಳ ದೊಡ್ಡ ಹೆಸರು ಮಾಡುತ್ತೀಯ. ನಮ್ಮ ಪೋಷಕರನ್ನು ಹೆಮ್ಮೆಪಡಿಸು. ನನಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ" ಎಂದು ಆ ಪತ್ರದಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್‌ಪೆಕ್ಟರ್ ಚೇತನ್ ಚೌಹಾಣ್ ಮಾತನಾಡಿ, ಪೊಲೀಸರು ಎಲ್ಲಾ ಕೋನಗಳಿಂದಲೂ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣಗಳು ತಿಳಿದುಬರಲಿವೆ ಎಂದು ಹೇಳಿದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net