ಛತ್ತರ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಮೊಬೈಲ್ ವ್ಯಸನಕ್ಕೆ ತೀವ್ರವಾಗಿ ತುತ್ತಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಆತನ ಮೊಬೈಲ್ ಕೆಳಗೆ ಬಿದ್ದು ಸ್ಕ್ರೀನ್ ಒಡೆದು ಹೋಗಿತ್ತು. ಇದರಿಂದ ಫೋನ್ ಬಳಸಲು ಅಸಾಧ್ಯವಾಗಿತ್ತು. ಕೂಡಲೇ ಫೋನ್ ರಿಪೇರಿ ಮಾಡಿಸಿಕೊಡುವಂತೆ ಬಾಲಕ ತನ್ನ ತಾಯಿಯನ್ನು ಪೀಡಿಸಿದ್ದಾನೆ. ಆದರೆ, ಮನೆಯಲ್ಲಿ ಸದ್ಯಕ್ಕೆ ಹಣದ ಅಭಾವವಿದ್ದ ಕಾರಣ, "ಈಗ ಹಣವಿಲ್ಲ, ಸ್ವಲ್ಪ ದಿನ ಬಿಟ್ಟು ಸರಿಪಡಿಸಿಕೊಡುತ್ತೇನೆ" ಎಂದು ತಾಯಿ ಹೇಳಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ಕ್ಷಣಿಕ ಆವೇಶದಲ್ಲಿ ಮನೆಯಲ್ಲಿದ್ದ ಇಲಿ ಪಾಷಾಣವನ್ನು (ವಿಷ) ಸೇವಿಸಿದ್ದಾನೆ.