ಬಿಸಿಲಿದೆ ಆಟ ಆಡಲು ಹೋಗಬೇಡ ಎಂದ ತಾಯಿ; ಆತ್ಮಹತ್ಯೆ ಮಾಡಿಕೊಂಡ 15 ವರ್ಷದ ಬಾಲಕ | Boy Suicide

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಬೈ: ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ಬಿಸಿಲಿನ ಕಾರಣಕ್ಕೆ 15 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಆಟವಾಡಲು ಹೋಗಬೇಡ ಎಂದು ತಾಯಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬುಧವಾರ(ಜ. 21) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಭಾನುವಾರ ಕೈಜ್​ನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ 9 ನೇ ತರಗತಿ ವಿದ್ಯಾರ್ಥಿಯಾಗಿದ್ದ ಆ ಹುಡುಗನ ಸ್ನೇಹಿತನೊಬ್ಬ ಅವನ ಮನೆಗೆ ಬಂದು ಆಟವಾಡಲು ಒತ್ತಾಯಿಸಿದ್ದ. ಆದರೆ ಬಿಸಿಲಿರುವ ಕಾರಣ ಮನೆಯೊಳಗೆ ಇರು ಸಂಜೆ 4 ಗಂಟೆ ಬಳಿಕ ಹೋಗು ಎಂದು ತಾಯಿ ಹೇಳಿದ್ದಾರೆ.
ಹೀಗಾಗಿ ಸ್ನೇಹಿತನ ಮುಂದೆ ಆಟವಾಡಲು ಕಳಿಸದಿದ್ದಕ್ಕೆ ನೊಂದ ಬಾಲಕ ಮನೆಯಲ್ಲಿ ತಂದೆ-ತಾಯಿ ಮಲಗುವ ಕೋಣೆಯಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಅಡುಗೆ ಮನೆಯ ಕೆಲಸದಲ್ಲಿ ನಿರತರಾಗಿದ್ದ ತಾಯಿ ಮೊದಲಿಗೆ ಬಾಲಕನನ್ನು ಅಷ್ಟಾಗಿ ಗಮನಿಸಿರಲಿಲ್ಲ. ಮಧ್ಯಾಹ್ನ ಬಳಿಕ ಮಲಗುವ ಕೋಣೆ ಒಳಗಿನಿಂದ ಲಾಕ್​ ಆಗಿರುವುದನ್ನು ನೋಡಿ ಬಾಗಿಲು ಬಡಿದಿದ್ದಾರೆ. ಎಚ್ಚರಗೊಂಡು ತಗೆಯದಿದ್ದ ಸಂದರ್ಭದಲ್ಲಿ ನರೆಯವರನ್ನು ಕರೆದು ಬಾಗಿಲು ಒಡೆದು ನೋಡಿದಾಗ ಬಾಲಕ ನೇಣುಬಿಗಿದುಕೊಂಡಿರುವುದು ಕಂಡಿದೆ.
ತಕ್ಷಣ ಬಾಲಕನನ್ನು ಕೈಜ್​ನಲ್ಲಿರುವ ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಿತಿ ಗಂಭೀರವಾಗಿದ್ದ ಕಾರಣ ದೂರದ 40 ಕಿಮೀ ದೂರದಲ್ಲಿರುವ ಅಂಬಾಜೋಗೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಈ ವೇಳೆ ಮಾರ್ಗಮಧ್ಯದಲ್ಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಕೈಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net