ತೆಲಂಗಾಣದಲ್ಲಿ ಮತ್ತೆ 15 ಮಂದಿ ನಕ್ಸಲರು ಶರಣಾಗತಿ; ಪ್ರಮುಖ ಮಾವೋವಾದಿ ನಾಯಕ ಸಹ ವಶಕ್ಕೆ | Naxalites

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಹೈದರಾಬಾದ್: ನಕ್ಸಲಿಸಂಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ತೆಲಂಗಾಣದ ಆದಿಲಬಾದ್ ಜಿಲ್ಲೆಯ ಸಿರ್ಪುರ್​ನಲ್ಲಿ ಇಂದು(ಡಿ. 16) 15 ಮಂದಿ ನಕ್ಸಲರು ಶರಣಾಗಿದ್ದಾರೆ(Naxalites surrender). ಜೊತೆಗೆ ಕೇಂದ್ರ ಕಮಿಟಿಯ ಪ್ರಮುಖ ಮಾವೋವಾದಿ ನಾಯಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಒಟ್ಟು 9 ಮಹಿಳಾ ನಕ್ಸಲರು ಮತ್ತು ಏಳು ಪುರುಷರು ಶರಣಾಗಿದ್ದಾರೆ. ಅವರಲ್ಲಿ ಹಿರಿಯ ಮಾವೋವಾದಿ ನಾಯಕ ಬಡೇ ಚೊಕ್ಕಾ ರಾವ್ ಅಲಿಯಾಸ್ ದಾಮೋದರ್ ಕೂಡ ಇದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರನ್ನು ಹೈದರಾಬಾದ್ ಡಿಜಿಪಿ ಕಚೇರಿಗೆ ಸ್ಥಳಾಂತರಿಸಲಾಗುತ್ತಿದೆ ಎನ್ನಲಾಗಿದೆ.
ಇತ್ತೀಚಿಗೆ ಮಾವೋವಾದಿ ಕೇಂದ್ರ ಕಮಿಟಿ ಅತಿ ಕಿರಿಯ ನಾಯಕನಾಗಿದ್ದ ಹಿಡ್ಮಾನನ್ನು ಆಂಧ್ರ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಅವರ ಪತ್ನಿ ಸೇರಿ 7 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net