ಆಸ್ಟ್ರೇಲಿಯಾ: ಸಾಮಾನ್ಯವಾಗಿ 13 ವರ್ಷದ ಮಕ್ಕಳೆಂದರೆ, ಆಟವಾಡುವುದು ಅಥವಾ ಓದುವುದನ್ನು ನಾವು ಕಲ್ಪನೆ ಮಾಡಿಕೊಳ್ಳುತ್ತೇವೆ. ಆದರೆ, ಆಸ್ಟ್ರೇಲಿಯಾದ 13 ವರ್ಷದ ಆಸ್ಟಿನ್ ಅಪ್ಪೆಲ್‌ಬೀ (Austin Appelbee) ಎಂಬ ಯುವಕನೊಬ್ಬ ತನ್ನ ಕುಟುಂಬವನ್ನು ಸಾವಿನ ದವಡೆಯಿಂದ ಪಾರು ಮಾಡುವ ಮೂಲಕ ಸಾಹಸ ಮೆರೆದಿದ್ದಾನೆ. ಆದಾಗ್ಯೂ, ಸಮುದ್ರದ ಭೀಕರ ಅಲೆಯಲ್ಲಿ ಸುಮಾರು 4 ಗಂಟೆಗಳ ಕಾಲ ಈಜಿ, ತನ್ನ ತಾಯಿ ಹಾಗೂ ಇಬ್ಬರು ಸಹೋದರರನ್ನು ರಕ್ಷಿಸಿ ಜಗತ್ತಿನಾದ್ಯಂತ ಸುದ್ಧಿಯಾಗಿದ್ದಾನೆ.