1.3 ಮಿಲಿಯನ್​ ಫಾಲೋವರ್ಸ್​... ಫ್ಲ್ಯಾಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ಫೈನಾನ್ಸ್ ಯೂಟ್ಯೂಬರ್​ ವಿ. ಹರೀಶ್​! Finance Influencer

ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ 'ಫೈನಾನ್ಸ್ ವಿತ್ ಹರೀಶ್' (Finance With Harish) ಎಂಬ ಹೆಸರಿನಲ್ಲಿ ಅನೇಕ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿಡಿಯೋಗಳ ಮುಖೇನ ಹಂಚಿಕೊಳ್ಳುತ್ತಿದ್ದ ಹರೀಶ್, ಯಾವ ಕಾರಣವನ್ನೂ ಹೇಳದೆ ಸಾವಿಗೆ ಶರಣಾಗಿರುವುದು ಸದ್ಯ ಶಂಕೆಗಳಿಗೆ ದಾರಿ ಮಾಡಿಕೊಟ್ಟಿದೆ.
Finance Influencer
1.3 ಮಿಲಿಯನ್​ ಫಾಲೋವರ್ಸ್​... ಫ್ಲ್ಯಾಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ಫೈನಾನ್ಸ್ ಯೂಟ್ಯೂಬರ್​ ವಿ. ಹರೀಶ್​! Finance Influencer
Published on: 

ಚೆನ್ನೈ: ಇನ್‌ಸ್ಟಾಗ್ರಾಮ್‌ನಲ್ಲಿ 13 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದ ತಮಿಳುನಾಡು ಮೂಲದ ಹೆಸರಾಂತ ಫೈನಾನ್ಸ್ ಇನ್‌ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್​ ವಿ. ಹರೀಶ್ (27), ಚೆನ್ನೈನಲ್ಲಿರುವ ತಮ್ಮ ಬಾಡಿಗೆ ವಿಲ್ಲಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸದ್ಯ ಸಾಲು ಸಾಲು ಅನುಮಾನಗಳಿಗೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ 'ಫೈನಾನ್ಸ್ ವಿತ್ ಹರೀಶ್' (Finance With Harish) ಎಂಬ ಹೆಸರಿನಲ್ಲಿ ಅನೇಕ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿಡಿಯೋಗಳ ಮುಖೇನ ಹಂಚಿಕೊಳ್ಳುತ್ತಿದ್ದ ಹರೀಶ್, ಯಾವ ಕಾರಣವನ್ನೂ ಹೇಳದೆ ಸಾವಿಗೆ ಶರಣಾಗಿರುವುದು ಸದ್ಯ ಶಂಕೆಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ, ಈ ಮಧ್ಯೆ, ಹರೀಶ್​ ಅವರ ತಂದೆ ಮಾಡಿರುವ ಆರೋಪಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ವೆಂಚರ್ ಸ್ಟುಡಿಯೋ ಸಿಇಒ ಒಬ್ಬರ ಸೈಬರ್ ಬೆದರಿಕೆಯೇ ಮಗನ ಸಾವಿಗೆ ಕಾರಣ ಎಂದು ಹರೀಶ್​ರ ತಂದೆ ಗಂಭೀರ ಆರೋಪ ಮಾಡಿದ್ದಾರೆ. ಜೆಮುರಿಯಾ ಇಂಕ್ ವೆಂಚರ್ ಸ್ಟುಡಿಯೋದ ಸಿಇಒ ಜೇಸನ್ ಸ್ಯಾಮ್ಯುಯೆಲ್ ಎಂಬುವವರು ತಮ್ಮ ಮಗನನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್​ ಮಾಡಿ, ಸೈಬರ್ ಬೆದರಿಕೆ ಒಡ್ಡಿದ್ದರು ಎಂದು ದೂರಿದ್ದಾರೆ.

ಜೇಸನ್ ಸ್ಯಾಮ್ಯುಯೆಲ್ ಅವರ ಆರೋಪಗಳ ಬೆನ್ನಲ್ಲೇ ಮೆಟಾ (Meta) ಸಂಸ್ಥೆಯವರು ಹರೀಶ್​ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ನಿಷ್ಕ್ರಿಯಗೊಳಿಸಿತ್ತು. ಇದರಿಂದಾಗಿ, ಹರೀಶ್ ಹೊಸ ಪೇಜ್​ ಹ್ಯಾಂಡಲ್ ಮೂಲಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದರು. ಈ ಬೆಳವಣಿಗೆಗಳಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದ ಹರೀಶ್, ವಿಪರೀತ ಮನನೊಂದು ಹೀಗೆ ಮಾಡಿಕೊಂಡಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯೂ ಆಗಬೇಕೆಂದು ಒತ್ತಾಯಿಸಿದ್ದಾರೆ.

ಸಿಇಒ ಜೇಸನ್ ಸ್ಯಾಮ್ಯುಯೆಲ್ ಸ್ಪಷ್ಟನೆ

ಮಂಗಳವಾರ ಸಂಜೆ 'ಎಕ್ಸ್' (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೇಸನ್ ಸ್ಯಾಮ್ಯುಯೆಲ್, ಹರೀಶ್ ಅವರ ಹಠಾತ್​ ಸಾವಿನಿಂದ ತೀವ್ರ ಆಘಾತವಾಗಿದೆ. ಆದರೆ, ನಾನು ಯಾವುದೇ ಸೈಬರ್ ಬೆದರಿಕೆ ಹಾಕಿಲ್ಲ. ಹರೀಶ್ ಅವರು ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರಲ್ಲ ಎಂಬುದನ್ನು ಹಾಗೂ ಅವರು ಇತ್ತೀಚೆಷ್ಟೇ ಎಎಂಎಫ್‌ಐ (AMFI) ನೋಂದಣಿ ಸಂಖ್ಯೆ (ARN) ಪಡೆದುಕೊಂಡಿರುವುದನ್ನು ಮಾತ್ರ ನಾವು ಎತ್ತಿ ತೋರಿಸಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.

Also Read
ಬಣ್ಣ ಬಣ್ಣದ ಸೋಪಾದ್ರೂ ಬರುವ ನೊರೆ ಮಾತ್ರ ಬಿಳಿಯೇ! ಏಕೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ | Soap Foam
Finance Influencer

"ನಾನು ಯಾರನ್ನೂ ಸೈಬರ್ ಬೆದರಿಕೆಗೆ ಒಳಪಡಿಸಿಲ್ಲ. ಹರೀಶ್ ಬಳಿ ಸೂಕ್ತ ಲೈಸನ್ಸ್​ ಇಲ್ಲದಿರುವುದು, ಸೆಬಿ ಹಾಗೂ ಎಎಂಎಫ್‌ಐಗೆ ಸಂಬಂಧಿಸಿದಂತೆ ಸತ್ಯವನ್ನು ತಿರುಚಿ ತಪ್ಪುದಾರಿಗೆಳೆಯುತ್ತಿರುವುದನ್ನು ಮಾತ್ರ ನಾನು ಬೆಟ್ಟು ಮಾಡಿ ತೋರಿಸಿದ್ದೆ" ಎಂದು ಸ್ಯಾಮ್ಯುಯೆಲ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, "ಸರಿಯಾದ ಸೆಬಿ ಪರವಾನಗಿ ಪಡೆದು ಮರಳಿ ಬರುವಂತೆಯೂ ನಾನು ವಿಡಿಯೋದಲ್ಲಿ ಕೇಳಿಕೊಂಡಿದ್ದೆ ವಿನಃ ಇಂಥ ಕಟು ನಿರ್ಧಾರಕ್ಕೆ ಬರುವಂತೆ ಮಾಡುವ ಯಾವುದೇ ಉದ್ದೇಶ ನನ್ನದಾಗಿರಲಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net