ಅಯ್ಯೋ ದುರ್ವಿಧಿಯೇ! ಟಾಟಾ ಸುಮೋ ಮೇಲೆ ಬಂಡೆ ಕುಸಿದು ಕನಿಷ್ಠ 13 ಮಂದಿ ದುರಂತ ಸಾವು | Himachal Chamba

ಕಾರಿನ ಮೇಲೆ ಬಂಡೆ ಬಿದ್ದ ದುರಂತ ದೃಶ್ಯ
ಕಾರಿನ ಮೇಲೆ ಬಂಡೆ ಬಿದ್ದ ದುರಂತ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಚಲಿಸುತ್ತಿದ್ದ ಟಾಟಾ ಸುಮೋ ಕಾರಿನ ಮೇಲೆ ಬೃಹತ್ ಆಕಾರದ ಬಂಡೆ ಕುಸಿತ
  • ಬಂಡೆ ಬಿದ್ದು ಕಾರಿನಲ್ಲಿದ್ದ 13 ಮಂದಿ ದುರಂತ ಸಾವು
ಹಿಮಾಚಲ ಪ್ರದೇಶ: ಚಲಿಸುತ್ತಿದ್ದ ಟಾಟಾ ಸುಮೋ ಕಾರಿನ ಮೇಲೆ ಬೃಹತ್ ಆಕಾರದ ಬಂಡೆಯೊಂದು ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಪರಿಣಾಮ ಕನಿಷ್ಠ 13 ಜನರು ದುರಂತ ಸಾವಿಗೀಡಾದ ಘಟನೆ ಚಂಬಾ ಜಿಲ್ಲೆಯಲ್ಲಿ ವರದಿಯಾಗಿದೆ.
ಬುಡಕಟ್ಟು ಪಂಗಿ ಕಣಿವೆಯ ಕಿಲ್ಲರ್-ಉದಯಪುರ ಮಾರ್ಗದ ಕಾಡು ನಲ್ಲಾದಲ್ಲಿ ಈ ದುರಂತ ಸಂಭವಿಸಿದೆ. ಬೆಟ್ಟದ ಇಳಿಜಾರಿನಿಂದ ಬಂಡೆಯ ಒಂದು ದೊಡ್ಡ ಭಾಗ ಕುಸಿದಿದ್ದು, ನೇರವಾಗಿ ಕಾರಿನ ಮೇಲೆ ಬಿದ್ದ ಹಿನ್ನಲೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆ ಸಂಭವಿಸಿದಾಗ ಸುಮೋದಲ್ಲಿದ್ದ ಎಲ್ಲ 13 ಜನರು ಉಸಿರು ಚೆಲ್ಲಿದ್ದಾರೆ ಎಂದು ಭರ್ಮೋರ್-ಪಂಗಿ ಶಾಸಕ ಡಾ. ಜನಕ್ ರಾಜ್ ದೃಢಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆಗಳು ಧಾವಿಸಿ, ಕುಸಿದ ಬಂಡೆ ಚೂರುಗಳನ್ನು ತೆರುವು ಮಾಡುವಲ್ಲಿ ನಿರತವಾಗಿವೆ. ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸಲು ಮತ್ತು ನಜ್ಜುಗುಜ್ಜಾದ ವಾಹನದಿಂದ ಶವಗಳನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.

ಐಎಂಡಿ ಎಚ್ಚರಿಕೆ ಬೆನ್ನಲ್ಲೇ ದುರಂತ

ಹಿಮಾಚಲ ಪ್ರದೇಶದಲ್ಲಿ ಹವಾಮಾನ ಚುರುಕುಗೊಂಡ ಹಿನ್ನಲೆ ಐಎಂಡಿ ಜುಲೈ 23ರಿಂದ 27 ರವರೆಗೆ ರಾಜ್ಯದಲ್ಲಿ ಭಾರಿ ಮಳೆ, ಗುಡ್ಡ ಕುಸಿತದ ಬಗ್ಗೆ ಯೆಲ್ಲೋ ಅಲರ್ಟ್ ಮೂಲಕ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಈ ಮಧ್ಯೆಯೇ, ಬಂಡೆ ಕಲ್ಲು ಕುಸಿದು 13 ಜನರ ಪ್ರಾಣ ಕಸಿದುಕೊಂಡಿರುವುದು ಭಾರಿ ದುರಂತ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net