ನವದೆಹಲಿ: ಜ.26ರಂದು 77ನೇ ಗಣರಾಜ್ಯೋತ್ಸವ ದಿನಾಚರಣೆಗೆ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆ ಪೊಲೀಸ್ ಹಾಗೂ ಭಾರತೀಯ ವಾಯುಪಡೆ ಇಲಾಖೆ ಸಕಲ ತಯಾರಿಗಳನ್ನು ನಡೆಸುತ್ತಿವೆ. ಪ್ರತಿವರ್ಷದಂತೆ ಬಾನಿನಲ್ಲಿ ಬಣ್ಣದ ಹಕ್ಕಿಯಂತೆ ಹಾರಾಡುವ ಭಾರತೀಯ ವಾಯುಪಡೆಯ ವಿಮಾನಗಳು, ಈ ವರ್ಷವು ವಿಶೇಷವಾಗಿ ಏರ್ ಶೋ ನಡೆಸಲು ಸಜ್ಜಾಗಿದೆ. ಆದರೆ, ಇದಕ್ಕೆ ಹಕ್ಕಿಗಳ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಕಾರಣ, ಪರ್ಯಾಯ ಪರಿಹಾರವನ್ನು ಕಂಡುಕೊಂಡಿದೆ.